ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು:ಗೋಬಿ ಮಂಚೂರಿ ಮಾಡುವಾಗಲೇ ಗ್ಯಾಸ್ ಖಾಲಿ.! - ಬೀದಿಬದಿ ವ್ಯಾಪಾರಿಗಳ ಬದುಕು ದುಸ್ತರ!

ಮೈಸೂರು: ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಪರಿಣಾಮವಾಗಿ ದೇಶಾದ್ಯಂತ ಗ್ಯಾಸ್ ಸಿಲಿಂಡರ್‌ಗಳ ತೀವ್ರ ಕೊರತೆ ಉಂಟಾಗಿದೆ. ಇದರ ಬಿಸಿ ಸಾಮಾನ್ಯ ಜನರಿಗೆ ಮಾತ್ರವಲ್ಲದೆ, ಬೀದಿ ಬದಿ ವ್ಯಾಪಾರಿಗಳಿಗೂ ತಟ್ಟಿದೆ. ಗ್ಯಾಸ್ ಸಿಲಿಂಡರ್ ಲಭ್ಯವಿಲ್ಲದೆ, ಗೋಬಿ ಮಂಚೂರಿ ತಯಾರಿಸುವ ವ್ಯಾಪಾರಿಯೊಬ್ಬರು ಸೌದೆ ಒಲೆಯನ್ನು ಬಳಸಿ ಗ್ರಾಹಕರಿಗೆ ಗೋಬಿ ಮಂಚೂರಿ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ವ್ಯಾಪಾರಿಗಳ ಅಳಲು: ದ್ವಿಮುಖ ಸಂಕಷ್ಟ

ಇರಾನ್-ಇಸ್ರೇಲ್ ಯುದ್ಧದಿಂದ ಉಂಟಾಗಿರುವ ಗ್ಯಾಸ್ ಸಿಲಿಂಡರ್ ಕೊರತೆ ಹಾಗೂ ಸೌದೆಯ ಬೆಲೆ ಏರಿಕೆಯಿಂದ ಬೀದಿಬದಿ ವ್ಯಾಪಾರಿಗಳ ಜೀವನ ನಡೆಸಲು ಕಷ್ಟಕರವಾಗಿದೆ. ಮುಂದಿನ ದಿನಗಳಲ್ಲಿ ಗ್ಯಾಸ್ ಕೊರತೆ ಇನ್ನಷ್ಟು ಹೆಚ್ಚಾದರೆ, ಈ ವ್ಯಾಪಾರಿಗಳ ಜೀವನೋಪಾಯಕ್ಕೆ ಭಾರಿ ಸಂಕಷ್ಟ ಎದುರಾಗಲಿದೆ ಎಂದು ವ್ಯಾಪಾರಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

Edited By :
PublicNext

PublicNext

17/03/2026 09:50 am

Cinque Terre

6.93 K

Cinque Terre

0

ಸಂಬಂಧಿತ ಸುದ್ದಿ