ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಾದಗಿರಿ: ನಾರಾಯಣಪುರ ಜಲಾಶಯದಿಂದ ನೀರು ಹರಿಸಲು ಮನವಿ!

ಯಾದಗಿರಿ: ಯಾದಗಿರಿಯ ನಾರಾಯಣಪುರ ಜಲಾಶಯದಿಂದ ಏಕದಂಡೆ ಕಾಲೂವೆಗೆ ಏಪ್ರಿಲ್ 15ರ ವರೆಗೂ ನೀರು ಹರಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವಿನಂತಿ ಮಾಡಿಕೊಂಡಿದೆ, ಕೃಷ್ಣಾ ಕಾಡಾ ನೀರು ಸಲಹಾ ಸಮಿತಿ ಏಪ್ರಿಲ್ 3ರವರೆಗೂ ಕಾಲುವೆಯಲ್ಲಿ ನೀರು ಹರಿಸಲು ಸೂಚಿಸಿದೆ ಆದರೆ ಇದರಿಂದ ರೈತರು ಬೆಳೆದಂತ ಸಜ್ಜೆ, ಶೇಂಗಾ, ಗೋಧಿ, ಭತ್ತ, ಜೋಳ ಸೇರಿದಂತೆ ಇತ್ಯಾದಿ ಬೆಳೆಗಳು ಹಾನಿಯಾಗುವ ಭೀತಿ ಇದೆ, ಏಪ್ರಿಲ್ ತಿಂಗಳಲ್ಲಿ ಈ ಎಲ್ಲಾ ಬೆಳೆ ಕಾಳು ಕಟ್ಟುವ ಹಂತದಲ್ಲಿ ಇರುತ್ತವೆ ಇದೇ ವೇಳೆ ನೀರು ನಿಲ್ಲಿಸಿದರೆ ರೈತರಿಗೆ ಭಾರಿ ನಷ್ಟ ಉಂಟಾಗುವ ಸಾಧ್ಯತೆ ಇದೆ, ಹೀಗಾಗಿ ರೈತರ ಕಷ್ಟವನ್ನು ಅರಿತುಕೊಂಡು ಕೃಷ್ಣಾ ಕಾಡಾ ನೀರು ಸಲಹಾ ಸಮಿತಿ ಏಪ್ರಿಲ್ 15ರ ವರೆಗೂ ನೀರು ಹರಿಸಬೇಕು ಇಲ್ಲದಿದ್ದರೆ ಹುಣಸಿಗಿ ತಾಲೂಕಿನ ರೈತರೆಲ್ಲರೂ ಸೇರಿ ಯುಕೆಪಿ ಕ್ಯಾಂಪ್ ನಾರಾಯಣಪುರ ಕಚೇರಿ ಎದುರು ಹೋರಾಟ ಮಾಡಬೇಕಾಗುತ್ತದೆ ಎಂದು ಆಗ್ರಹಿಸಿದ್ದಾರೆ.

Edited By : Somashekar
PublicNext

PublicNext

17/03/2026 11:10 am

Cinque Terre

7.61 K

Cinque Terre

0