ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಬಳ್ಳಾಪುರ :ರೈತರ ಸಂಕಷ್ಟಕ್ಕೆ ಕೊನೆಗೂ ಮುಕ್ತಿ - ಕೋರ್ಟ್ ಆದೇಶದಿಂದ ಭೂಮಿಗೆ ದಾರಿ

ಸ್ಲಗ್ : ಒತ್ತುವರಿದಾರರ ಹಾಗೂ ಅಧಿಕಾರಿಗಳ ನಡುವೆ ದಾರಿ ಬಿಡಿಸುವ ವಿಚಾರಕ್ಕೆ ಹೈಡ್ರಾಮಾ

ಚಿಂತಾಮಣಿ : ರೈತರ ಜಮೀನುಗಳಿಗೆ ಕೃಷಿ ಚಟುವಟಿಕೆಗಳು ಮಾಡಲು ದಾರಿ ಇಲ್ಲದೆ ಪರದಾಡುತ್ತಿದ್ದ ರೈತರಿಗೆ ದಾರಿ ಬಿಡಿಸುವ ವಿಚಾರಕ್ಕೆ ಅಧಿಕಾರಿಗಳ ಹಾಗೂ ಒತ್ತುವರಿದಾರರ ನಡುವೆ ಜಟಾಪಟಿ ನಡೆದು ಕೊನೆಗೆ ಅಧಿಕಾರಿಗಳು ಒತ್ತುವರಿಯನ್ನು ತೆರವುಗೊಳಿಸಿ ರೈತರಿಗೆ ಅನುಕೂಲವಾಗುವಂತೆ ದಾರಿ ಮಾಡಿಕೊಟ್ಟ ಘಟನೆ ನಡೆದಿದೆ.

ವಿ..ಪ್ಲೋ...

ಹೌದು ಚಿಂತಾಮಣಿ ತಾಲ್ಲೂಕಿನ ಮುಂಗಾನಹಳ್ಳಿ ಹೋಬಳಿಯ ಮಿಂಡಿಗಲ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಮಿಂಡಿಗಲ್ ಗ್ರಾಮದ ಸರ್ವೆ ನಂಬರ್ 207 ರ,ಎಂ ವಿ ವೆಂಕಟರೆಡ್ಡಿ ಎಂಬುವವರು ದಾರಿ ವಿಚಾರಕ್ಕೆ ತಹಸಿಲ್ದಾರ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಹೈಕೋರ್ಟ್ ನ್ಯಾಯಾಲಯದ ಮೆಟ್ಟಲೇರಿದ್ದು, ನ್ಯಾಯಾಲಯ ಸರ್ವೆ ಕಾರ್ಯ ನಡೆಸಿ ದಾರಿ ಬಿಡಿಸುವಂತೆ ಆದೇಶ ಮಾಡಿದ ಹಿನ್ನೆಲೆಯಲ್ಲಿ ತಾಲೂಕು ದಂಡಾಧಿಕಾರಿಗಳ ಆದೇಶದಂತೆ ಕಂದಾಯ ಇಲಾಖೆಯ ರೆವಿನ್ಯೂ ಇನ್ಸ್ಪೆಕ್ಟರ್ ಕೊಟ್ರೇಶ್,ಹಾಗೂ ಸಿಬ್ಬಂದಿ ಕೆಂಚಾರ್ಲಹಳ್ಳಿ ಪೊಲೀಸರ ಬಂದೋಬಸ್ತ್ ಪಡೆದುಕೊಂಡು ಸರ್ವೆ ಕಾರ್ಯ ಮಾಡಲು ಭೂ ಮಾಪನ ಇಲಾಖೆ ಅಧಿಕಾರಿಗಳೊಂದಿಗೆ ಮುಂದಾದರು.

ವಿ..ಪ್ಲೋ..

ಸರ್ವೇ ಅಧಿಕಾರಿಗಳು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಸರ್ವೆ ನಡೆಸಿದ ನಂತರ ಒತ್ತುವರಿಯಾಗಿರುವುದನ್ನು ಗುರುತಿಸಿ ತೆರವುಗೊಳಿಸಲು ಮುಂದಾದಾಗ ವೆಂಕಟರೆಡ್ಡಿ ಹಾಗೂ ಅವರ ಕುಟುಂಬದ ಸದಸ್ಯರು ತೆರವು ಮಾಡಲು ಅವಕಾಶ ಮಾಡಿಕೊಡದೆ, ಮೊದಲು ಊರಿನಿಂದ ತೆರವು ಮಾಡಿಕೊಂಡು ಬನ್ನಿ!ಇಲ್ಲದಿದ್ದರೆ ಎರಡು ದಿನಗಳ ಕಾಲ ಗಡುವು ಕೊಡಿ ಎಂದು ಪಟ್ಟು ಹಿಡಿದಿದ್ದಲ್ಲದೆ ಅಧಿಕಾರಿಗಳ ವಿರುದ್ಧ ತಿರುಗಿ ಬಿದ್ದಾಗ ಅಧಿಕಾರಿಗಳು ಅವರಿಗೆ ಪ್ರತಿಕ್ರಿಯಿಸಿ ನ್ಯಾಯಾಲಯದ ಆದೇಶ ಇದೆ! ಇದಕ್ಕೆ ಗಡುವು ನೀಡಲು ಸಾಧ್ಯವಾಗಲ್ಲ ಎಂದು ಹೇಳಿ,ಒತ್ತುವರಿದಾರರು ತೆರವು ಕಾರ್ಯಾಚರಣೆಗೆ ಅವಕಾಶ ಮಾಡಿಕೊಡದ ಹಿನ್ನೆಲೆಯಲ್ಲಿ ಪೊಲೀಸರು ಮಧ್ಯ ಪ್ರವೇಶಿಸಿ ಒತ್ತುವರಿದಾರರನ್ನು ತಡೆಹಿಡಿದು ತೆರವು ಕಾರ್ಯಾಚರಣೆಗೆ ಅನುವು ಮಾಡಿಕೊಟ್ಟರು.

ವಿ.. ಪ್ಲೋ..

ಚಿಕ್ಕತೇಕಹಳ್ಳಿ ಡಿ ಶಿವಕುಮಾರ್ ಪಬ್ಲಿಕ್ ನೆಕ್ಸ್ಟ್ ಚಿಕ್ಕಬಳ್ಳಾಪುರ

Edited By :
PublicNext

PublicNext

17/03/2026 01:19 pm

Cinque Terre

9.44 K

Cinque Terre

0