ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ : 18.3.2026

ಮೇಷ: ವೃತ್ತಿ ಹಾಗೂ ಉದ್ಯೋಗದಲ್ಲಿ ಹೊಸ ಅವಕಾಶಗಳ ಸುಳಿವು. ವ್ಯವಹಾರದಲ್ಲಿ ಚಟುವಟಿಕೆ ಹೆಚ್ಚಬಹುದು. ಕುಟುಂಬದಲ್ಲಿ ಸಂತಸ.

ವೃಷಭ: ಹಣಕಾಸು ವಿಚಾರಗಳಲ್ಲಿ ಜಾಗ್ರತೆ ಅಗತ್ಯ. ಉದ್ಯೋಗದಲ್ಲಿ ಹಿರಿಯರ ಸಲಹೆ ಉಪಯುಕ್ತ. ಆರೋಗ್ಯದತ್ತ ಸ್ವಲ್ಪ ಗಮನ ಕೊಡಿ.

ಮಿಥುನ: ಶಿಕ್ಷಣ, ಐಟಿ-ಬಿಟಿ ಹಾಗೂ ತಾಂತ್ರಿಕ ಕ್ಷೇತ್ರದವರಿಗೆ ಅನುಕೂಲಕರ ದಿನ. ಹೊಸ ಯೋಜನೆ ಆರಂಭಿಸಲು ಉತ್ತಮ ಅವಕಾಶ.

ಕಟಕ: ಉದ್ಯೋಗದಲ್ಲಿ ಕೆಲಸದ ಒತ್ತಡ ಹೆಚ್ಚಾಗುತ್ತದೆ. ಕುಟುಂಬದ ವಿಚಾರಗಳಲ್ಲಿ ಸಹನೆ ಇರಲಿ. ನೂತನ ಗೃಹ ನಿರ್ಮಾಣಕ್ಕೆ ಚಾಲನೆ.

ಸಿಂಹ: ವ್ಯಾಪಾರ, ಸ್ವಂತ ಉದ್ಯಮದಲ್ಲಿ ಲಾಭದ ಸೂಚನೆ. ಸ್ನೇಹಿತರ ಸಹಕಾರದಿಂದ ಪ್ರಮುಖ ಕೆಲಸಗಳು ಬೇಗ ಮುಗಿಯಲಿವೆ.

ಕನ್ಯಾ: ಸಂಶೋಧನೆಯಲ್ಲಿ ಪ್ರಗತಿ. ರಾಜಕೀಯ ಕ್ಷೇತ್ರದಲ್ಲಿ ಹೊಸ ಜವಾಬ್ದಾರಿ ದೊರೆವ ಸಾಧ್ಯತೆ. ಆಹಾರ ಮಾರಾಟದಲ್ಲಿ ಇಳಿಮುಖ.

ತುಲಾ: ಪಾಲುದಾರಿಕೆಯಲ್ಲಿ ಉತ್ತಮ ಫಲ ಸಿಗಲಿದೆ. ಹೊಸ ವ್ಯಕ್ತಿಗಳ ಪರಿಚಯದಿಂದ ಲಾಭ. ಆಸ್ತಿ ವಿವಾದ ಕೋರ್ಟ್ ಮೆಟ್ಟಿಲೇರಲಿದೆ.

ವೃಶ್ಚಿಕ: ಮಾಡುವ ಉದ್ಯೋಗದಲ್ಲಿ ಜಾಗ್ರತೆ ಅಗತ್ಯ. ಕೃಷಿ ಕ್ಷೇತ್ರದಲ್ಲಿ ಉದ್ಯೋಗ ಪ್ರಾಪ್ತಿ. ಆಭರಣಗಳ ವ್ಯಾಪಾರದಲ್ಲಿ ಮಿಶ್ರ ಫಲವಿದೆ.

ಧನಸ್ಸು: ವಿದೇಶೀ ಸಂಬಂಧಿತ ಕಾರ್ಯಗಳಲ್ಲಿ ಪ್ರಗತಿ ಸಾಧ್ಯ. ಕುಟುಂಬದಲ್ಲಿ ದೇವತಾ ಕಾರ್ಯಗಳಿಂದ ಶಾಂತಿ. ಕಲಾವಿದರಿಗೆ ಶುಭದಿನ.

ಮಕರ: ಬ್ಯಾಂಕ್​ನಲ್ಲಿ ಸಾಲ ಮಂಜೂರಾಗಲಿದೆ. ಉದ್ಯೋಗದಲ್ಲಿ ಪರಿಶ್ರಮಕ್ಕೆ ಹಿರಿಯರಿಂದ ಪ್ರಶಂಸೆ. ಆರ್ಥಿಕವಾಗಿ ನಿಧಾನವಾದ ಲಾಭ.

ಕುಂಭ: ತಾಂತ್ರಿಕ ಕ್ಷೇತ್ರದ ಉದ್ಯೋಗಿಗಳಿಗೆ ಉತ್ತಮ ದಿನ. ಸ್ನೇಹಿತರ ಸಹಾಯದಿಂದ ಪ್ರಮುಖ ಸಮಸ್ಯೆಯಿಂದ ಹೊರಬಂದು ನಿರಾಳ.

ಮೀನ: ಆಧ್ಯಾತ್ಮಿಕ ಚಿಂತನೆ ಹೆಚ್ಚಬಹುದು. ಅಲಂಕಾರಿಕ ವಸ್ತು ವ್ಯವಹಾರದಲ್ಲಿ ಪ್ರಗತಿ. ಬಹುಕಾಲದ ನಂತರ ಮನೆಯಲ್ಲಿ ಶುಭ ಕಾರ್ಯ.

Edited By : Nirmala Aralikatti
PublicNext

PublicNext

18/03/2026 07:31 am

Cinque Terre

63.18 K

Cinque Terre

0