ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ - ಆಂಬುಲೆನ್ಸ್ ನಲ್ಲಿ ಬಂದು ಸ್ಟ್ರಚರ್ ಬೆಡ್ ಮೇಲೆ SSLC ಪರೀಕ್ಷೆ ಬರೆದ ವಿದ್ಯಾರ್ಥಿನಿ

ಕೆಜಿಎಫ್ - ರಾಜ್ಯಾದ್ಯಂತ ಇಂದು 10ನೇ ತರಗತಿ ಪರೀಕ್ಷೆಗಳು ಆರಂಭವಾಗಿದ್ದು, ಕೋಲಾರ ಜಿಲ್ಲೆಯ ಕೆ ಜಿ ಎಫ್ ತಾಲೂಕಿನ ಸೆಂಟ್ ಜೋಸೆಫ್ ಶಾಲೆಯಲ್ಲಿ ವಿದ್ಯಾರ್ಥಿನಿ ಒಬ್ಬಳು ಆಂಬುಲೆನ್ಸ್ ನಲ್ಲಿ ಬಂದು ಪರೀಕ್ಷೆ ಬರೆದಿರುವ ಘಟನೆ ವರದಿಯಾಗಿದೆ.

ಆಂಬುಲೆನ್ಸ್ ನಲ್ಲಿ ವಿದ್ಯಾರ್ಥಿನಿ ಬಂದು ಪರೀಕ್ಷೆ ಬರೆದಿದ್ದಾಳೆ. ವಿದ್ಯಾರ್ಥಿನಿ ಕುಸುಮ ಹತ್ತನೇ ತರಗತಿ ಪರೀಕ್ಷೆ ಬರೆಯುತ್ತಿದ್ದಾಳೆ. ಇತ್ತೀಚಿಗೆ ಅಷ್ಟೇ ಅಪಘಾತದಲ್ಲಿ 10ನೇ ತರಗತಿ ವಿದ್ಯಾರ್ಥಿನಿ ಕುಸುಮ ಕಾಲು ಕಳೆದುಕೊಂಡಿದ್ದು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ, ತಾಯಿ ಜೊತೆಗೆ ಬಂದು ಪರೀಕ್ಷೆಗೆ ಹಾಜರಾಗಿದ್ದಾಳೆ. ವಿದ್ಯಾರ್ಥಿನಿಗೆ ಬಿಇಒ ಅನುಮತಿ ಕೊಟ್ಟಿದ್ದಾರೆ. ಕೆಜಿಎಫ್ ತಾಲೂಕಿನ ಚಿನ್ನಗನಹಳ್ಳಿ ನಿವಾಸಿ ಆಗಿರುವ ಕುಸುಮಾ ಆಂಬುಲೆನ್ಸ್ ನಲ್ಲಿ ಬಂದು ಪರೀಕ್ಷೆ ಬರೆದಿದ್ದಾಳೆ..

Edited By : PublicNext Desk
PublicNext

PublicNext

18/03/2026 11:40 am

Cinque Terre

3.34 K

Cinque Terre

0