ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗದಲ್ಲಿ ವಾಣಿಜ್ಯ ಅನಿಲ ಅಭಾವ: ಹೋಟೆಲ್ ಉದ್ಯಮದ ಬದುಕು ಕಂಗಾಲು!

ಗದಗ : ಗಲ್ಫ್ ರಾಷ್ಟ್ರಗಳ ಯುದ್ಧ ಎಫೆಕ್ಟ್ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಅಭಾವ ಗದಗದಲ್ಲಿ ಹೆಚ್ಚಳವಾಗಿದೆ.

ಕಮರ್ಷಿಯಲ್ ಗ್ಯಾಸ್ ಸಿಗದೆ ಡಾಬಾ ಮಾಲೀಕರ ಸಂಕಷ್ಟ ಹೇಳತೀರದಾಗಿದೆ. ಗದಗ ಜಿಲ್ಲೆ ನರಗುಂದ ಪಟ್ಟಣದ ಶೆಟ್ಟಿ ಫ್ಯಾಮಿಲಿ ರೆಸ್ಟೋರೆಂಟ್ ಅಲ್ಲಿ ಘಟನೆ ನಡೆದಿದೆ.

ಕಳೆದ ಒಂಬತ್ತು ವರ್ಷಗಳಿಂದ ಹೋಟೆಲ್ ಉದ್ಯಮ ಮಾಡಿಕೊಂಡು ಬಂದಿದ್ದೇವೆ ಕಮರ್ಷಿಯಲ್ ಗ್ಯಾಸ್ ಸಮಸ್ಯೆ ಆಗಲಿಲ್ಲ. ಯುದ್ಧದ ಎಫೆಕ್ಟ್ ನಿಂದ ಕಮರ್ಷಿಯಲ್ ಗ್ಯಾಸ್ ಸಿಗುತ್ತಿಲ್ಲ, ಕಮರ್ಷಿಯಲ್ ಗ್ಯಾಸ್ ಗೆ ದಿನದಿಂದ ದಿನಕ್ಕೆ ರೇಟ್ ಜಾಸ್ತಿ ಮಾಡುತ್ತಿದ್ದಾರೆ.

ಮೊದಲು ಕಮರ್ಷಿಯಲ್ ಗ್ಯಾಸ್ ದರ 1950 ರೂ ಇತ್ತು. ಆದರೆ ಈಗ 3500 - 4000 ಸಾವಿರ ರೂಗೆ ಮಾರಾಟ ಮಾಡುತ್ತಿದ್ದಾರೆ ಅಂತ ಗ್ಯಾಸ್ ಏಜೆನ್ಸಿ ವಿರುದ್ಧ ಹೋಟೆಲ್ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ

Edited By : Somashekar
PublicNext

PublicNext

18/03/2026 11:51 am

Cinque Terre

12.13 K

Cinque Terre

0

ಸಂಬಂಧಿತ ಸುದ್ದಿ