ಬೆಳಗಾವಿ: ಬೆಳಗಾವಿ ನಗರದಲ್ಲಿ ಬಿರುಗಾಳಿ ಮಿಶ್ರಿತ ಆಲಿಕಲ್ಲು ಮಳೆಗೆ ಬೃಹತ್ ತಗಡಿನ ಶೆಡ್ಡು ನೆಲಕ್ಕೆ ಉರಳಿದ್ದು, ಸ್ವಲ್ಪದರಲ್ಲೇ ದೊಡ್ಡ ಅನಾಹುತ ತಪ್ಪಿದೆ.
ಕೆಎಲ್ ಇ ಸಂಸ್ಥೆ ಆವರಣದಲ್ಲಿ ತಗಡಿನ ಶೆಡ್ಡು ಹಾರಿಬಿದ್ದಿದ್ದು, ದೊಡ್ಡ ಅನಾಹುತ ತಪ್ಪಿದೆ. ಮಳೆಯ ಜೊತೆಗೆ ವೇಗವಾಗಿ ಗಾಳಿ ಬೀಸಿದ ಪರಿಣಾಮ ಕೆಎಲ್ ಇ ಸಂಸ್ಥೆಯ ಎರಡು ಅಂತಸ್ತಿನ ಕಟ್ಟಡದ ಮೇಲಿನಿಂದ ತಗಡಿನ ಶೆಡ್ಡು ಕೆಳಗೆ ಉರುಳಿ ಬಿದ್ದಿದೆ. ಸದ್ಯ ಈ ಘಟನೆಯಲ್ಲಿ ಯಾವುದೇ ಪ್ರಾಣ ಸಾವು ನೋವುಗಳು ಸಂಭವಿಸಿಲ್ಲ.
ಕೆಳಗೆ ಉರುಳಿ ಬಿದ್ದ ತಗಡಿನ ಶೆಡ್ಡನ್ನು ಎರಡು ಕ್ರೇನ್ ಬಳಸಿ ತೆರವುಗೊಳಿಸಲಾಗಿದೆ. ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
PublicNext
18/03/2026 11:56 am
LOADING...