ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಯುದ್ಧದ ಬಿಕ್ಕಟ್ಟು - ಬೆಳಗಾವಿಯ ಕೈಗಾರಿಕೆಗಳಿಗೆ ಗ್ಯಾಸ್ ಟ್ರಬಲ್

ಬೆಳಗಾವಿ: ಮಧ್ಯಪ್ರಾಚ್ಯದಲ್ಲಿ ಯುದ್ಧದ ಬಿಕ್ಕಟ್ಟಿನಿಂದ ಬೆಳಗಾವಿಯಲ್ಲಿ ಕೈಗಾರಿಕೆಗಳಿಗೂ ಗ್ಯಾಸ್ ಟ್ರಬಲ್ ಶುರುವಾಗಿದ್ದು, ಅಮೆರಿಕಾ, ಯುರೋಪ್, ಮೆಕ್ಸಿಕೊ, ಸೌತ್ ಕೋರಿಯಾಗೆ ರಫ್ತು ಮಾಡ್ತಿದ್ದ ಕಂಪನಿ ಪರದಾಡುತ್ತಿವೆ.

ಬೆಳಗಾವಿ ನಗರದ ಮಚ್ಚೆ ಪ್ರದೇಶದಲ್ಲಿರೋ ಆಕಾಶ ಫಾರ್ಮಿಂಗ್ ಟೆಕ್ನಾಲಜಿ ಸೇರಿದಂತೆ ಅನೇಕ ಕಂಪನಿಗಳಿಗೆ ಸಂಕಟ ಶುರುವಾಗಿದೆ.‌ ಮಹೇಶ ಇನಾಮದಾರ್ ಒಡೆತನದ ಕಂಪನಿ 110 ವಿವಿಧ ವಸ್ತುಗಳನ್ನು ತಯಾರಿಸುತ್ತೆ‌. ಗ್ಯಾಸ್ ಕಟ್ಟಿಂಗ್, ಪೌಡರ್, ಪವರ್ ಕೋಟಿಂಗ್, ಕಲರ್ ಕೋಟಿಂಗ್ ಮಾಡಲು ಗ್ಯಾಸ್ ಬೇಕಾಗುತ್ತೆ. ಆದರೆ ಗ್ಯಾಸ್ ಇಲ್ದೆ ಕಂಪನಿ ಮಾಲೀಕರು ಪರದಾಟ ನಡೆಸಿದ್ದಾರೆ. ಯುದ್ಧ ಪರಿಣಾಮ ಕಳೆದೊಂದು ವಾರದಿಂದ ಸಪ್ಲೈ ಚೈನ್ ಸಮಸ್ಯೆ ಆಗ್ತಿದೆ.‌ ಗ್ಯಾಸ್ ಇಲ್ದೆ ಕೋಟಿಂಗ್ ಸಮಸ್ಯೆ ಆಗುತ್ತಿದೆ. ಡಿಸ್ಪಾಚ್ ಮಾಡೋಕೆ ತೊಂದರೆ ಆಗುತ್ತಿದ್ದು, ಪ್ಯಾಕಿಂಗ್ ಮೆಟೀರಿಯಲ್ಸ್ ಸಿಗ್ತಿಲ್ಲ.‌ ಇದರ ಪರಿಣಾಮ ಕಾರ್ಮಿಕನಿಗೂ ತೊಂದರೆ ಆಗುತ್ತಿದೆ.

ಗ್ಯಾಸ್ ಸಮಸ್ಯೆಯಿಂದ ಪ್ರೊಡಕ್ಷನ್ ಮಾಡೋಕೆ ಆಗ್ತಿಲ್ಲ. ಒಂದು ಡಿಸ್ಪಾಚ್ ಆಗಲಿಲ್ಲ ಅಂದರೆ ಚೈನ್ ಸಿಸ್ಟಮ್ ಇರುತ್ತೆ ಎಲ್ಲರಿಗೂ ಸಮಸ್ಯೆ ಆಗುತ್ತೆ. ಸ್ಟೀಲ್ ಸಿಗ್ತಿಲ್ಲ. ಮಾರ್ಕೆಟ್‌ನಲ್ಲಿ ರೇಟ್ ಹೆಚ್ಚಳ ಮಾಡಿದ್ದಾರೆ. ಇದರ ಎಫೆಕ್ಟ್ ನನಗಷ್ಟೇ ಆಗೊದಿಲ್ಲ ದೇಶದ ಎಲ್ಲ ಕೈಗಾರಿಕೆಗಳು ಸಮಸ್ಯೆ ಎದುರಿಸುತ್ತಿವೆ ಎಂದು ಮಹೇಶ ಇನಾಮದಾರ್ ತಿಳಿಸಿದ್ದಾರೆ.

Edited By :
PublicNext

PublicNext

20/03/2026 06:00 pm

Cinque Terre

12.3 K

Cinque Terre

0

ಸಂಬಂಧಿತ ಸುದ್ದಿ