ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕೋಡಿ: ಅಕಾಲಿಕ ಮಳೆಗೆ ಕುರಿಗಾಹಿ ಕುಟುಂಬ ಸಂಕಷ್ಟ - 39 ಕುರಿಗಳ ಸಾವು

ಚಿಕ್ಕೋಡಿ: ಸಂಕೇಶ್ವರ ಪಟ್ಟಣದ ಹೊರವಲಯದಲ್ಲಿ ತಡರಾತ್ರಿ ಸುರಿದ ಅಕಾಲಿಕ ಮಳೆ ಮತ್ತು ಆಲೆಕಲ್ಲು ಮಳೆಯಿಂದ ಕುರಿಗಾಹಿ ಕುಟುಂಬದ ಮೇಲೆ ಭಾರೀ ಅವಾಂತರ ಉಂಟಾಗಿದೆ.

ಬಡಪಾಯಿ ಕುರಿಗಾಹಿ ಕುಟುಂಬಕ್ಕೆ ಸೇರಿದ್ದ ಸುಮಾರು 39 ಕುರಿಗಳು ಮಳೆಗೆ ಸಿಲುಕಿ ಸಾವನ್ನಪ್ಪಿದ್ದು, ಹತ್ತಾರು ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ. ಈ ಕುರಿಗಳು ಶಂಕರ ಕರಜಗಿ ಅವರಿಗೆ ಸೇರಿದ್ದವು ಎಂದು ತಿಳಿದುಬಂದಿದೆ.

ಅಕಸ್ಮಾತ್ ಸುರಿದ ಭಾರೀ ಮಳೆ ಹಾಗೂ ಆಲೆಕಲ್ಲುಗಳಿಂದ ಕುರಿಗಳಿಗೆ ಆಶ್ರಯ ಸಿಗದೆ ದುರಂತ ಸಂಭವಿಸಿದೆ. ಘಟನೆ ಬಳಿಕ ಸ್ಥಳಕ್ಕೆ ಪಿಡಿಓ ಹಾಗೂ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ಮಳೆಯ ಅಟ್ಟಹಾಸಕ್ಕೆ ಮತ್ತೊಂದು ಉದಾಹರಣೆಯಾಗಿ ಪರಿಣಮಿಸಿದ್ದು, ಕುರಿಗಾಹಿ ಕುಟುಂಬದ ಬದುಕಿಗೆ ದೊಡ್ಡ ಹೊಡೆತ ನೀಡಿದೆ.

Edited By : PublicNext Desk
Kshetra Samachara

Kshetra Samachara

18/03/2026 01:19 pm

Cinque Terre

15.42 K

Cinque Terre

0