ಚಿಕ್ಕೋಡಿ : ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರಂತರವಾಗಿ ಪ್ರತಿ ವರ್ಷ ಗ್ರೂಪ್ ಎ, ಬಿ, ಸಿ, ಡಿ ದರ್ಜೆ ಹುದ್ದೆಗಳ ನೇಮಕಾತಿ ಪ್ರಾಧಿಕಾರದ ಆಯೋಗದ ವತಿಯಿಂದ ಮಾಡುತ್ತಿದೆ ಇವುಗಳ ಯಶಸ್ಸು ಸಾಧಿಸಲು ಸೂಕ್ತ ಅಧ್ಯಯನ , ತಯಾರಿ ಮತ್ತು ಪ್ರಯತ್ನ ಸಮಯದ ಸದುಪಯೋಗ ನಿರ್ದಿಷ್ಟ ಗುರಿ ಸಾಧನೆಗೆ ಇಚ್ಛಾಶಕ್ತಿ ಸದ್ಬಳಕೆ ಮಾಡಿಕೊಳ್ಳಬೇಕು ಆ ಮೂಲಕ ಯಾವುದೇ ಪರೀಕ್ಷೆಗಳು ಉತ್ತೀರ್ಣರಾಗಲು ಸಾದ್ಯ ಎಂದು ಸಂಪನ್ಮೂಲ ವ್ಯಕ್ತಿ ಜ್ಞಾನ ಕಾಶಿ ಕರಿಯರ್ ಅಕಾಡೆಮಿ ಎಂ. ಎನ್. ರೆಡ್ಡಿ ಧಾರವಾಡ ಹೇಳಿದರು .
ನಗರದ ಕೆ.ಎಲ್.ಇ ಸಂಸ್ಥೆಯ ಬಸವ ಪ್ರಭು ಕೋರೆ ಕಲಾ,ವಿಜ್ಞಾನ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದ ಇಂಗ್ಲೀಷ್ ಮತ್ತು ರಾಜ್ಯ ಶಾಸ್ತ್ರ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ಒಂದು ದಿನದ ಕರಿಯರ ಗೈಡೆನ್ಸ್ ಕುರಿತ ಕಾರ್ಯಾಗಾರ ದಲ್ಲಿ ಸಂಪನ್ಮೂಲ ವ್ಯಕ್ತಿ ಯಾಗಿ ಮಾತನಾಡಿದ ಅವರು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಇಂದು ಸ್ಪರ್ಧಾತ್ಮಕ ಪರೀಕ್ಷೆಗೆ ಹೆಚ್ಚಿನ ಸಂಖ್ಯೆಯಲ್ಲಿ ತಯಾರಿ ನಡೆಸುತ್ತಿದ್ದಾರೆ ಅವರಿಗೆ ಸೂಕ್ತ ಮಾಹಿತಿ ಮತ್ತು ಮಾರ್ಗದರ್ಶನ ಸಲಹೆ ಅವಶ್ಯಕತೆ ಇದೆ .ಕೇಂದ್ರ ಲೋಕಸೇವಾ ಆಯೋಗ, ಎಸ್.ಎಸ್.ಸಿ, ಐ.ಬಿ .ಪಿ.ಎಸ್ ಬ್ಯಾಂಕಿಂಗ್ ಸೇವೆ , ರಾಜ್ಯ ಲೋಕಸೇವಾ ಆಯೋಗ, ಕೆ.ಇ.ಎ ಸೇರಿದಂತೆ ವಿವಿಧ ಸರ್ಕಾರಿ ಆಯೋಗಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನೇಮಕಾತಿಯನ್ನು ಮಾಡಿಕೊಳ್ಳುತ್ತಿದ್ದು ಪ್ರಚಲಿತ ವಿದ್ಯಮಾನ ಇಂಗ್ಲಿಷ್ ಅವೇರ್ನೆಸ್, ಮೆಂಟಲ್ ಎಬಿಲಿಟಿ ಅಂಡ್ ಆಪ್ಟಿಟುಡ್ ಟೆಸ್ಟ್, ಸಾಮಾನ್ಯ ಜ್ಞಾನ ಸೇರಿದಂತೆ ವಿವಿಧ ವಿಷಯಗಳಲ್ಲಿ ಸಮಗ್ರ ಜ್ಞಾನ ಮತ್ತು ಅಧ್ಯಯನದಲ್ಲಿ ಸೂಕ್ತ ತಯಾರಿ ಯಶಸ್ಸಿಗೆ ದಾರಿ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಡಾ. ಬಿ. ಜಿ. ಕುಲಕರ್ಣಿ ಮಾತನಾಡಿ ಸ್ಪರ್ಧಾತ್ಮಕ ಯಶಸ್ಸಿಗೆ ಉತ್ತಮ ಯೋಚನೆ, ಯೋಜನೆ. ಪ್ರಯತ್ನ, ಏಕಾಗ್ರತೆ, ತಯಾರಿ, ಕೌಶಲ್ಯ, ಅನುಷ್ಠಾನ, ಯಶಸ್ಸು ಕ್ರಮಬದ್ಧವಾಗಿ ಅಧ್ಯಾಯನ ಮಾಡಿದಲ್ಲಿ ಯಶಸ್ಸು ಸಾಧ್ಯ. ವೈದ್ಯಕೀಯ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ವಿದ್ಯಾರ್ಥಿಗಳು ಕಲಾ ವಿಭಾಗ ವಿಷಯಗಳ ಆಯ್ಕೆ ಮಾಡಿ ಪರೀಕ್ಷೆ ಉತ್ತೀರ್ಣರಾದ ಶ್ರೇಣಿ ಹೆಚ್ಚಿದೆ. ಆದ್ದರಿಂದ ಕಲಾ ವಿಭಾಗದಲ್ಲಿ ಅಧ್ಯಾಯನ ಮಾಡುವ ವಿದ್ಯಾರ್ಥಿಗಳು ಗಂಭೀರವಾಗಿ ಪಠ್ಯಕ್ರಮ ಆಧಾರಿತ ಪುಸ್ತಕಗಳನ್ನು ಓದುವ ಮೂಲಕ ಪರೀಕ್ಷೆ ಯಶಸ್ವಿ ಸಾಧಿಸಲು ಸಾಧ್ಯ ಎಂದು ಹೇಳಿದರು.
ಉಪ ಪ್ರಾಚಾರ್ಯ ಸುಧೀರ್ ಕೋಠಿವಾಲೆ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು ಸ್ಪರ್ಧಾತ್ಮಕ ಯುಗದಲ್ಲಿ ಪದವಿ ನಂತರ ವಿದ್ಯಾರ್ಥಿಗಳು ಉದ್ಯೋಗ ಅವಕಾಶ ಹುಡುಕಿಕೊಂಡು ಹೋಗುವ ಪ್ರಕ್ರಿಯೆ, ಧನಾತ್ಮಕ ಚಿಂತನೆ, ಗ್ರಾಮೀಣ ಪ್ರದೇಶದ ಯುವಕರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಡೆಸುವ ಹುದ್ದೆಗಳಿಗೆ ನೇಮಕಾತಿ ಹೊಂದಲು ಬರೀ ಕನಸು ಕಾಣದೆ ಸೂಕ್ತ ತಯಾರಿ ಮೂಲಕ ಗುರಿಯನ್ನು ತಲುಪಲು ಈ ರೀತಿಯ ಕಾರ್ಯಾಗಾರ ಹೆಚ್ಚಿನ ಸಂಖ್ಯೆಯಲ್ಲಿ ಮಹಾವಿದ್ಯಾಲಯದಲ್ಲಿ ಆಯೋಜಿಸುವ ಮೂಲಕ ವಿದ್ಯಾರ್ಥಿಗಳು ಪರೀಕ್ಷೆ ಭಯ ಹೋಗಲಾಡಿಸಲು ಮತ್ತು ಧೈರ್ಯ ಹೆಚ್ಚು ಮಾಡುವುದು ನಾಡಿನ ಹೆಮ್ಮೆಯ ಕೆ.ಎಲ್. ಇ ಸಂಸ್ಥೆಯ ಬಸವ ಪ್ರಭು ಕೋರೆ ಪದವಿ ಮಹಾವಿದ್ಯಾಲಯ ಯಾವಾಗಲೂ ಗ್ರಾಮೀಣ ಪ್ರದೇಶದ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿರುವ ವಿದ್ಯಾರ್ಥಿಗಳು ಕನಸಿಗೆ ಪ್ರೋತ್ಸಾಹ, ತರಬೇತಿ , ಸೂಕ್ತ ಸಲಹೆ ಮತ್ತು. ಮಾರ್ಗದರ್ಶನ ಮಾಡುವ ಸಲುವಾಗಿ ಧಾರವಾಡದ ಜ್ಞಾನ ಕಾಶಿ ಕರಿಯರ ಅಕೆಡೆಮಿ ಜೊತೆಗೆ MOU ಒಡಂಬಡಿಕೆ ಮಾಡಿಕೊಂಡಿದೆ. ಪ್ರತಿ ದಿನ 3 ಗಂಟೆ ವಿಶೇಷ ತರಬೇತಿ ನೀಡಲಾಗುವುದು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರು.
ಐ.ಕ್ಯೂ.ಎ.ಸಿ . ಸಂಯೋಜಕ ಡಾ. ವಿನಾಯಕ ಮಜಲಾಪುರ ಇಂಗ್ಲೀಷ್ ವಿಭಾಗದ ಮುಖ್ಯಸ್ಥೆ ಡಾ.ಗೀತಾಂಜಲಿ ದೊಡ್ಡಮನಿ , ಡಾ. ಬಾಪುಗೌಡ ಪಾಟೀಲ್. ಎಂ.ಆರ್. ಛಾಯಾ, ಡಾ.ಸುನೀಲ್ ಪಾಟೀಲ್ ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.
ಸೌಜನ್ಯ ಮಠಪತಿ ಪ್ರಾರ್ಥನಾ ಗೀತೆಯನ್ನು ಹಾಡಿದರು. ಮಂಥನ ಪಾಟೀಲ್ ಸ್ವಾಗತಿಸಿದರು. ಕಾಲೇಜು ಉಪಪ್ರಾಚಾರ್ಯ ಸುಧೀರ ಕೊಠಿವಾಲೆ ಪ್ರಸ್ತಾವಿಕ ಮಾತನಾಡಿ ಅಥಿತಿ ಪರಿಚಯಸಿದರು. ದಿವ್ಯಾ ಜಯಗೌಡರ ಮತ್ತು ಸರ್ವಮಂಗಳ ಮಠಪತಿ ನಿರೂಪಿಸಿದರು. ಅಂಕಿತಾ ಬಸಣ್ಣವರ ವಂದಿಸಿದರು.
Kshetra Samachara
18/03/2026 02:50 pm