ಯಲ್ಲಾಪುರ: ಯುಗಾದಿ ಉತ್ಸವದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಯಲ್ಲಾಪುರ ಪಟ್ಟಣದಲ್ಲಿ ಬೃಹತ್ ಬೈಕ್ ರ‍್ಯಾಲಿಯನ್ನು ಆಯೋಜಿಸಲಾಗಿತ್ತು.
ಪಟ್ಟಣದ ಕಾಳಮ್ಮನಗರ ಕ್ರೀಡಾಂಗಣದಲ್ಲಿ ಚಾಲನೆಗೊಂಡ ಈ ರ‍್ಯಾಲಿಯಲ್ಲಿ ನೂರಾರು ಬೈಕ್ ಸವಾರರು, ಮಹಿಳೆಯರು ಮತ್ತು ಯುವತಿಯರು ಉತ್ಸಾಹದಿಂದ ಭಾಗವಹಿಸಿದ್ದರು. ಬೈಕ್ ಸವಾರರು ತಮ್ಮ ವಾಹನಗಳಿಗೆ ಭಗವಾಧ್ವಜಗಳನ್ನು ಅಳವಡಿಸಿಕೊಂಡು, ಕೇಸರಿ ಶಾಲುಗಳನ್ನು ಧರಿಸಿ ಸಂಭ್ರಮದಿಂದ ಸಾಗಿದರು. ಈ ರ‍್ಯಾಲಿಯು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಎಲ್ಲರ ಗಮನ ಸೆಳೆಯಿತು.
PublicNext
18/03/2026 04:29 pm
LOADING...