ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಲ್ಲಾಪುರ : ಪ್ರೇಕ್ಷಕರನ್ನು ರಂಜಿಸಿದ ಗಾನ ವೈಭವ

ಯಲ್ಲಾಪುರ : ತಾಲೂಕಿನ ದೇಸಾಯಿಮನೆಯಲ್ಲಿ ಶನಿವಾರ ಮಧ್ಯಾಹ್ನ ನಡೆದ ಹಿಮ್ಮೇಳ ವೈಭವ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

ಈ ಕಾರ್ಯಕ್ರಮವನ್ನು ಪುರೋಹಿತರಾದ ವೇ. ಕೃಷ್ಣ ಭಟ್ಟ ಭಟ್ರಕೇರಿಯವರು ಉದ್ಘಾಟಿಸಿ ಶುಭಕೋರಿದರು. PLD ಬ್ಯಾಂಕ್ ಅಧ್ಯಕ್ಷ ಆರ್.ಎಸ್.ಭಟ್ಟ ಎಲ್ಲರನ್ನೂ ಸ್ವಾಗತಿಸಿ, ಕಲಾವಿದರನ್ನು ಗೌರವಿಸಿದರು.

ಭಾಗವತರಾಗಿ ಸತೀಶ ಹೆಗಡೆ ದಂಟಕಲ್, ದಿನೇಶ ಭಟ್ಟ ಅಬ್ಬಿತೋಟ, ಶಶಾಂಕ ಬೋಡೆ ಪಾಲ್ಗೊಂಡಿದ್ದರು, ಮದ್ದಳೆ ವಾದಕರಾಗಿ ಶಂಕರ ಭಾಗವತ್ ಯಲ್ಲಾಪುರ, ನಾಗಪ್ಪ ಕೋಮಾರ್ ಹಾಗೂ ಚಂಡೆ ವಾದಕರಾಗಿ ಪ್ರಮೋದ ಕಬ್ಬಿನಗದ್ದೆ ಭಾಗವಹಿಸಿದ್ದರು. ವಿವಿಧ ಪ್ರಸಂಗಗಳ ಪದ್ಯಗಳನ್ನು ಪ್ರಸ್ತುತಪಡಿಸಲಾಯಿತು. ನೂರಾರು ಪ್ರೇಕ್ಷಕರು ಹಿಮ್ಮೇಳ ವೈಭವವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

Edited By : PublicNext Desk
PublicNext

PublicNext

21/03/2026 06:19 pm

Cinque Terre

5.92 K

Cinque Terre

0

ಸಂಬಂಧಿತ ಸುದ್ದಿ