ಶಿರಸಿ: ಮಾರ್ಚ 18 ರಂದು ಯುಗಾದಿ ಉತ್ಸವದ ಅಂಗವಾಗಿ ಯುಗಾದಿ ಉತ್ಸವ ಸಮಿತಿ ವತಿಯಿಂದ ಬುಧವಾರ ನಗರದಲ್ಲಿ ಬೃಹತ್ ಬೈಕ್ ರ್ಯಾಲಿ ಆಯೋಜಿಸಲಾಗಿತ್ತು. ಭಾರತ ಮಾತೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಗೈಯ್ಯುವ ಮೂಲಕ ಈ ಬೃಹತ್ ಬೈಕ್ ರ್ಯಾಲಿಗೆ ಯುಗಾದಿ ಉತ್ಸವ ಸಮಿತಿ ಅಧ್ಯಕ್ಷ ರಮೇಶ ದುಭಾಷಿ ಚಾಲನೆ ನೀಡಿದರು.
ಈ ವೇಳೆ ಉತ್ಸವ ಸಮಿತಿ ಸಂಚಾಲಕ ಕೃಷ್ಣ ಎಸಳೆ, ಉಪಾಧ್ಯಕ್ಷ ಚಂದ್ರು ಎಸಳೆ, ಸುರೇಶ ಶೆಟ್ಟಿ, ಆನಂದ ಸಾಲೇರ್, ಶಿಲ್ಪಾ ಭಾಸ್ಕರ್, ಕೃಷ್ಣ ಕೊಡಿಯಾ, ನಾಗರಾಜ ಮಡಿವಾಳ, ದೀಪಕ್ ದೊಡ್ಡೂರು, ನಾಗರಾಜ ನಾಯ್ಕ, ಗೋಪಾಲ ದೇವಾಡಿಗ, ಉಷಾ ಹೆಗಡೆ ಸೇರಿದಂತೆ ಹಿಂದೂ ಸಂಘಟನೆಗಳ ಪ್ರಮುಖರು ಭಾಗಿಯಾಗಿದ್ದರು.
ವಿಕಾಸಾಶ್ರಮದಿಂದ ಆರಂಭಗೊಂಡ ಬೈಕ್ ರ್ಯಾಲಿ, ಮರಾಠಿಕೊಪ್ಪ, ಯಲ್ಲಾಪುರ ನಾಕಾ, ವಿವೇಕಾನಂದ ನಗರ, ಕಸ್ತೂರಬಾ ನಗರ, ಕೋಟೆಕೆರೆ, ಮಾರಿಕಾಂಬಾ ದೇವಾಲಯ, ರಾಯರಪೇಟೆ, ಶಿವಾಜಿ ಚೌಕ್, ಬಸ್ಟ್ಯಾಂಡ್ ಸರ್ಕಲ್, ರಾಘವೇಂದ್ರ ಸರ್ಕಲ್, ದೇವಿಕೆರೆ ಮಾರ್ಗವಾಗಿ ವಿಕಾಸಾಶ್ರಮದಲ್ಲಿ ಕೊನೆಗೊಂಡಿತು. ಸಾವಿರಕ್ಕೂ ಅಧಿಕ ಬೈಕ್ ಸವಾರರು ಈ ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.
Kshetra Samachara
18/03/2026 07:59 pm
LOADING...