ಭಟ್ಕಳ: ತಾಲೂಕಿನ ನಗರ ಭಾಗದಲ್ಲಿ ಭಾನುವಾರ ನಡೆಯಲಿರುವ ಬೃಹತ್ ನಗರ ಹಿಂದೂ ಸಂಗಮ ಕಾರ್ಯಕ್ರಮದ ಅಂಗವಾಗಿ, ಶನಿವಾರ ಹಿಂದೂ ಕಾರ್ಯಕರ್ತರು ಬೃಹತ್ ಬೈಕ್ ರ‍್ಯಾಲಿ ನಡೆಸಿದರು.
ಭಾನುವಾರ ನಡೆಯಲಿರುವ ಬೃಹತ್ ನಗರ ಹಿಂದೂ ಸಂಗಮ ಕಾರ್ಯಕ್ರಮಕ್ಕೆ ಸಾರ್ವಜನಿಕರನ್ನು ಆಹ್ವಾನಿಸುವ ಉದ್ದೇಶದಿಂದ ಈ ರ‍್ಯಾಲಿಯನ್ನು ಆಯೋಜಿಸಲಾಗಿತ್ತು. ಈ ರ‍್ಯಾಲಿಯಲ್ಲಿ ಹಲವು ಹಿಂದೂ ಸಂಘಟನೆಗಳ ಕಾರ್ಯಕರ್ತರು ಉತ್ಸಾಹದಿಂದ ಭಾಗವಹಿಸಿದ್ದರು.
ರ‍್ಯಾಲಿಯ ಮಾರ್ಗ ಮತ್ತು ಭದ್ರತಾ ವ್ಯವಸ್ಥೆ
ಚನ್ನಪಟ್ಟಣದ ಹನುಮಾನ್ ದೇವಸ್ಥಾನದಿಂದ ಆರಂಭವಾದ ಬೃಹತ್ ಬೈಕ್ ರ‍್ಯಾಲಿಯು ಆಸರಕೇರಿ, ಮಗ್ಗದೊಮ್ ಕಾಲೋನಿ, ಸರ್ಕಲ್, ರಂಗಿಕಟ್ಟೆ, ಹೊರುಳಿಸಾಲ್, ಸಾಗರ ರಸ್ತೆ ಮೂಲಕ ಸಾಗಿ, ಪಿ.ಎಲ್.ಡಿ ಬ್ಯಾಂಕ್ ರಸ್ತೆವರೆಗೆ ತಲುಪಿತು. ಬಳಿಕ ಪುನಃ ಚನ್ನಪಟ್ಟಣ ಹನುಮಾನ್ ದೇವಸ್ಥಾನಕ್ಕೆ ಆಗಮಿಸುವ ಮೂಲಕ ರ‍್ಯಾಲಿ ಸುಗಮವಾಗಿ ಮುಕ್ತಾಯಗೊಂಡಿತು.
ರ‍್ಯಾಲಿ ಸಾಗಿದ ಮಾರ್ಗದುದ್ದಕ್ಕೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ ಎಂ.ಎನ್., ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಕೃಷ್ಣಮೂರ್ತಿ, ಡಿವೈಎಸ್ಪಿ ಗಿರೀಶ್, ಸಿಪಿಐ ದಿವಾಕರ ಪಿ.ಎಂ., ಗ್ರಾಮೀಣ ಠಾಣೆ ಸಿಪಿಐ ವೆಂಕಟೇಶ್ ಎಸ್. ಮುರ್ನಾಳ್ ಹಾಗೂ ನಗರ ಠಾಣೆ ಪಿಎಸ್ಐ ನವೀನ್ ಎಸ್. ನಾಯ್ಕ ಅವರ ನೇತೃತ್ವದಲ್ಲಿ ಬಿಗಿ ಭದ್ರತಾ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿತ್ತು.
PublicNext
07/03/2026 06:47 pm
LOADING...