ಶಿರಸಿ: ಶಿರಸಿಯ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಚಾಂದ್ರಮಾನ ಯುಗಾದಿಯ ಪಂಚಾಂಗ ಶ್ರವಣ ಹಾಗೂ ಪಾನಕ ಪೂಜೆ ವಿಜೃಂಭಣೆಯಿಂದ ಜರುಗಿತು.
ಪರಾಭವ ನಾಮ ಸಂವತ್ಸರದ ವಸಂತ ಋತು, ಚೈತ್ರ ಶುದ್ಧ ಪಾಡ್ಯ, ಗುರುವಾರದಂದು ಈ ಚಾಂದ್ರಮಾನ ಯುಗಾದಿಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಹಾಗೂ ಶ್ರೀ ಶ್ರೀಮದ್ ಆನಂದಬೋಧೇಂದ್ರ ಸರಸ್ವತೀ ಮಹಾಸ್ವಾಮಿಗಳವರ ದಿವ್ಯ ಉಪಸ್ಥಿತಿಯಲ್ಲಿ "ಪರಾಭವ" ನಾಮ ಸಂವತ್ಸರದ ಪಂಚಾಂಗ ಶ್ರವಣ ಹಾಗೂ ಪಾನಕ ಪೂಜಾ ಕಾರ್ಯಕ್ರಮಗಳು ವಿಧಿಪೂರ್ವಕವಾಗಿ ನೆರವೇರಿದವು.
ಪಂಚಾಂಗ ಭವಿಷ್ಯ ಮತ್ತು ಗಣ್ಯರ ಪಾಲ್ಗೊಳ್ಳುವಿಕೆ
ಡಾ. ಕೃಷ್ಣ ಜೋಶಿ ಮೂಲೆಮನೆ ಅವರು ಈ ವರ್ಷದ ಶುಭಾಶುಭ ಫಲಗಳನ್ನು ವಿವರವಾಗಿ ವಿವರಿಸುವ ಮೂಲಕ ಪಂಚಾಂಗವನ್ನು ಪಠಿಸಿದರು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪುರೋಹಿತರಾದ ವೇದಮೂರ್ತಿ ಚಿನ್ಮಯ ಜೋಶಿ, ಪಾಠಶಾಲೆಯ ಅಧ್ಯಾಪಕರುಗಳು, ವಿದ್ಯಾರ್ಥಿಗಳು, ಗ್ರಾಮದವರು ಹಾಗೂ ಅಪಾರ ಸಂಖ್ಯೆಯ ಶಿಷ್ಯಭಕ್ತರು ಪಾಲ್ಗೊಂಡಿದ್ದರು.
Kshetra Samachara
19/03/2026 06:37 pm
LOADING...