ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ ಟ್ರ್ಯಾಕ್ಟರ್ ದುರಂತ: ಇಂಜಿನ್ ನಡುವೆ ಸಿಲುಕಿ ಯುವ ಚಾಲಕ ಬಲಿ

ಹಾವೇರಿ: ಇಟ್ಟಿಗೆ ತುಂಬಿದ ಟ್ರ್ಯಾಕ್ಟರ್‌ನ ಇಂಜಿನ್ ಮತ್ತು ಟ್ರೇಲರ್ ನಡುವೆ ಸಿಲುಕಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ. ಹಾವೇರಿ ತಾಲೂಕಿನ ಮರೋಳ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ.

ಮೃತ ದುರ್ದೈವಿ ಚಾಲಕನನ್ನು ಹಾವೇರಿ ತಾಲೂಕಿನ ಗುತ್ತಲ ತಾಂಡಾ ನಿವಾಸಿ, 26 ವರ್ಷದ ದೇವರಾಜ್ ಲಮಾಣಿ ಎಂದು ಗುರುತಿಸಲಾಗಿದೆ.

ಬೆಳಗ್ಗೆ ಎರಡೂವರೆ ಸಾವಿರ ಇಟ್ಟಿಗೆಗಳನ್ನು ತುಂಬಿಕೊಂಡು ಮರೋಳ ಗ್ರಾಮಕ್ಕೆ ಬಂದಿದ್ದ ವೇಳೆ ಈ ದುರಂತ ಸಂಭವಿಸಿದೆ. ಇಟ್ಟಿಗೆಗಳನ್ನು ಹೊತ್ತು ಸಾಗುತ್ತಿದ್ದ ಟ್ರ್ಯಾಕ್ಟರ್‌ನ ಇಂಜಿನ್ ಏಕಾಏಕಿ ಮೇಲೆ ಎದ್ದಿದ್ದು, ನಿಯಂತ್ರಣ ಕಳೆದುಕೊಂಡ ಪರಿಣಾಮ ಚಾಲಕ ಇಂಜಿನ್ ಮತ್ತು ಟ್ರೇಲರ್ ನಡುವೆ ಸಿಲುಕಿ ಮೃತಪಟ್ಟಿದ್ದಾರೆ.

ಈ ಸಂಬಂಧ ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Edited By :
PublicNext

PublicNext

18/03/2026 10:23 pm

Cinque Terre

21.19 K

Cinque Terre

0

ಸಂಬಂಧಿತ ಸುದ್ದಿ