ಹಾವೇರಿ: ವಿಷಪೂರಿತ ಆಹಾರ ಸೇವಿಸಿ ದಾರಿಯುದ್ದಕ್ಕೂ ಬಿದ್ದು 10 ಎಮ್ಮೆಗಳು ಸಾವನ್ನಪ್ಪಿದ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ. ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲೂಕಿನ ಮೇದೂರು ಗ್ರಾಮದಲ್ಲಿ ಎಮ್ಮೆಗಳು ಸಾಮೂಹಿಕ ಸಾವನ್ನಪ್ಪಿದ ಘಟನೆ ನಡೆದಿದೆ.
ಗ್ರಾಮದ ರೈತ ಸಿದ್ದಪ್ಪ ಬತ್ತಿಕೊಪ್ಪ ಎಂಬುವರಿಗೆ ಸೇರಿದ ಎಮ್ಮೆಗಳು ಸಾವನ್ನಪ್ಪಿವೆ. ಬೆಳಗ್ಗೆಯಿಂದ ಸಂಜೆವರೆಗೆ ಜಮೀನು ಹಾಗೂ ರಸ್ತೆಯ ಬದಿಯಲ್ಲಿ ಮೇವು ತಿಂದಿದ್ದ ಎಮ್ಮೆಗಳು ಸಾವನ್ನಪ್ಪಿವೆ.
ಏಕಾಏಕಿ ಸಂಜೆ ಮನೆಗೆ ವಾಪಸು ಬರುತ್ತಿದ್ದ ವೇಳೆ ಎಮ್ಮೆಗಳು ಅಸ್ವಸ್ಥಗೊಂಡು ಮಾರ್ಗಮಧ್ಯದಲ್ಲಿ ಸಾವನ್ನಪ್ಪಿವೆ. ಎಮ್ಮೆಯ ಮಾಲೀಕ ಸಿದ್ದಪ್ಪ ಬತ್ತಿಕೊಪ್ಪ ಎಮ್ಮೆ ಮೃತದೇಹಗಳ ಮುಂದೆ ನಿಂತು ಕಣ್ಣೀರು ಹಾಕಿದ್ದಾನೆ.
PublicNext
10/03/2026 08:01 am
LOADING...