ಹಾವೇರಿ: ಹಾವೇರಿ ಜಿಲ್ಲೆಯ ಹಲವೆಡೆ ಆಲಿಕಲ್ಲು ಮಳೆಯಾಗಿದ್ದು, ಅದರಲ್ಲೂ ರಾಣೆಬೆನ್ನೂರು ತಾಲೂಕಿನ ಮೆಡ್ಲೇರಿ ಮತ್ತು ಯಲ್ಲಾಪುರ ಗ್ರಾಮಗಳಲ್ಲಿ ತೀವ್ರವಾಗಿ ಸುರಿದಿದೆ. ಆಲಿಕಲ್ಲುಗಳು ರಸ್ತೆಯ ಬದಿಗಳಲ್ಲಿ ರಾಶಿ ರಾಶಿ ಸಂಗ್ರಹವಾಗಿದ್ದು, ಕೆಲವೆಡೆ ಮಳೆ ಪೀಡಿತ ಪ್ರದೇಶಗಳು ಕಾಶ್ಮೀರದಂತೆ ಬಿಳಿಚಿಕೊಂಡಿದ್ದವು.
ಈ ಅಕಾಲಿಕ ಆಲಿಕಲ್ಲು ಮಳೆಯಿಂದಾಗಿ ರೈತರು ತಮ್ಮ ವಿವಿಧ ಬೆಳೆಗಳಿಗೆ ಹಾನಿಯಾಗುವ ಆತಂಕ ವ್ಯಕ್ತಪಡಿಸಿದ್ದಾರೆ. ಮಾವಿನ ಮರಗಳಲ್ಲಿದ್ದ ಮಾವಿನಕಾಯಿಗಳು ಭಾರಿ ಪ್ರಮಾಣದಲ್ಲಿ ಉದುರಿ ಬಿದ್ದಿದ್ದು, ಮಾವು ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
PublicNext
19/03/2026 10:44 pm
LOADING...