ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾನಗಲ್ : ಕಟುಕರರಿಂದ ಗೋವುಗಳನ್ನು ಕಾಪಾಡಿದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು.!

ಹಾನಗಲ್ : ಯಾವುದೇ ಪರವಾನಗಿ ಇಲ್ಲದೇ ಅಕ್ರಮವಾಗಿ ದೇಶಿ ತಳಿಯ ಗೋವುಗಳನ್ನು

ಕ್ಯಾಂಟರ್ ವಾಹನದಲ್ಲಿ ಕಸಾಯಿ ಖಾನೆಗೆ ಸಾಗಿಸುತ್ತಿದ್ದ ಖದೀಮನನ್ನು, ಹಾನಗಲ್ ತಾಲೂಕಿನ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ತಡೆದು, ಹನ್ನೆರಡು ದೇಶಿ ತಳಿಯ ಗೋವುಗಳನ್ನು ಕಟುಕರಿಂದ ರಕ್ಷಣೆ ಮಾಡಿರುವ ಘಟನೆ ಹಾನಗಲ್ ತಾಲೂಕು ತಿಳವಳ್ಳಿ

ಗ್ರಾಮದಲ್ಲಿ ನಡೆದಿದೆ..

ಹೌದು ರಾಜ್ಯದಲ್ಲಿ ಅಕ್ರಮ ಗೋವು ಸಾಗಾಟ ದಿನೇದಿನೇ ಹೆಚ್ಚಾಗುತ್ತಿದ್ದು, ಇದನ್ನು ತಡೆಯಲು ಹಗಲು-ರಾತ್ರಿ ಎನ್ನದೆ ಹಿಂದೂಪರ ಸಂಘಟನೆ ಕಾರ್ಯಕರ್ತರು ಕಾರ್ಯಾಚರಣೆ ನಡೆಸುತ್ತಿದ್ದಾರೆ, ಇದೇ ಸಂದರ್ಭದಲ್ಲಿ ಮಂಗಳವಾರ ನಸುಕಿನ 3.ಗಂಟೆ ಸುಮಾರಿಗೆ ತಿಳವಳ್ಳಿ ಗ್ರಾಮದ ಆನವಟ್ಟಿ ರಸ್ತೆ ಮೂಲಕ ಗೋವುಗಳನ್ನು ಕ್ಯಾಂಟರ್ ಮೂಲಕ ಸಾಗಿಸುತ್ತಿರುವ ಬಗ್ಗೆ , ಖಚಿತ ಮಾಹಿತಿ ತಿಳಿದ ಹಿಂದೂ ಜಾಗರಣ ಕಾರ್ಯಕರ್ತರ ಕಾರ್ಯಾಚರಣೆ ನಡೆಸಿ, ತಿಳವಳ್ಳಿ ಸರ್ಕಲ್ ಬಳಿ ಕ್ಯಾಂಟರ್ ವಾಹನವನ್ನು ತಡೆದು ತಪಾಸಣೆ ನಡೆಸಿದ್ದಾರೆ,ಈ ವೇಳೆ ಅಕ್ರಮ ಗೋ ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ,

ಇನ್ನೂ ಕ್ಯಾಂಟರ್ ವಾಹನಕ್ಕೆ ಜೈ ಹನುಮಾನ ಎಂಬ ನಾಮಫಲಕ ಹಾಕಿಕೊಂಡು, ಅಡಿಕೆ ಸಿಪ್ಪೆಗಳಿಂದ ಗೋವುಗಳನ್ನು ಮುಚ್ಚಿಕೊಂಡು ಉಸಿರುಗಟ್ಟುವ ರೀತಿಯಲ್ಲಿ, 10ಕ್ಕೂ ಹೆಚ್ಚು ದೇಶಿ ತಳಿಯ ಹಸುಗಳನ್ನು ಕ್ರೂರವಾಗಿ ತುಂಬಲಾಗಿತ್ತು . ಕನಿಷ್ಠ ಗಾಳಿ ಬೆಳಕು, ಆಹಾರವೂ ಇರದಂತೆ ಈ ಗೋವುಗಳನ್ನು ಅಮಾನವೀಯವಾಗಿ ಕ್ಯಾಂಟರ್ ವಾಹನದಲ್ಲಿ ತುಂಬಿ ಬೇರೆ ಜಿಲ್ಲೆಗೆ ಸಾಗಿಸುತ್ತಿದ್ದರು ಎನ್ನಲಾಗಿದೆ. ಇನ್ನೂ ಹನ್ನೆರಡು ದೇಶಿ ತಳಿಯ ಗೋವುಗಳನ್ನು ಕಟುಕರಿಂದ ರಕ್ಷಣೆ ಮಾಡಿ ಪೊಲೀಸರಿಗೆ ಒಪ್ಪಿಸಿರುತ್ತಾರೆ..

ಇನ್ನೂ ಗೋವುಗಳನ್ನು ವಧೆ ಮಾಡಿ ಮಾಂಸವನ್ನು ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ಕ್ಯಾಂಟರ್ ವಾಹನ ಮೂಲಕ ಕಸಾಯಿ ಖಾನೆಗೆ ಸಾಗಿಸುತ್ತಿದ್ದರು ಎನ್ನಲಾಗಿದೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಡೂರು ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

'ಲೋಕೇಶ್ ಸುಣಗಾರ್ ಪಬ್ಲಿಕ್ ನೆಕ್ಸ್ಟ್ ಹಾನಗಲ್ '

Edited By :
PublicNext

PublicNext

11/03/2026 01:31 pm

Cinque Terre

13.37 K

Cinque Terre

0

ಸಂಬಂಧಿತ ಸುದ್ದಿ