ಸಾರಿಗೆ ಬಸ್‌ನಲ್ಲಿ ಚಿನ್ನದ ಸರ ಕಳೆದುಕೊಂಡ ಮಹಿಳೆ ಸಾರಿಗೆ ಬಸ್ಸನ್ನೇ ಪೊಲೀಸ್ ಸ್ಟೇಷನ್‌ಗೆ ತಂದ ಘಟನೆ ಹಾವೇರಿಯಲ್ಲಿ ನಡೆದಿದೆ. ಹಾವೇರಿ ನಗರದ ಬಸ್ ನಿಲ್ದಾಣದಲ್ಲಿ ಸರ ಕಳೆದುಕೊಂಡ ಮಹಿಳೆ ಹಾವೇರಿ ನಗರ ಠಾಣೆಗೆ ಬಸ್ ಬಿಡಲು ಹೇಳಿದ್ದಾಳೆ. ಬಸ್ ಸಮೇತ ಪೊಲೀಸ್ ಠಾಣೆಗೆ ಬಂದಿದ್ದಾಳೆ.
ಮೀನಾಕ್ಷಿ ಕಾಗಿನೆಲೆ ಬಸ್‌ನಲ್ಲಿ ಚಿನ್ನ ಕಳೆದುಕೊಂಡ ಮಹಿಳೆ. ಮೀನಾಕ್ಷಿ ಹಾನಗಲ್ ತಾಲೂಕು ಹಿರೇಬಾಸೂರು ಗ್ರಾಮದ ನಿವಾಸಿ. ಅಡ ಇಟ್ಟಿದ್ದ 10 ಗ್ರಾಂ ಚಿನ್ನಭರಣವನ್ನ ಮೀನಾಕ್ಷಿ ಬಿಡಿಸಿಕೊಂಡು ಊರಿಗೆ ತೆಗೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ.
ಬಸ್ ನಿರ್ವಾಹಕ ಬಸ್ ಟಿಕೆಟ್ ಕೇಳಿದಾಗ ಆಧಾರ್ ಕಾರ್ಡ್ ತೋರಿಸಲು ಮುಂದಾಗಿದ್ದಾಳೆ. ಈ ಸಂದರ್ಭದಲ್ಲಿ ಚಿನ್ನದ ಸರ ಕಳ್ಳತನವಾಗಿರುವುದು ಗೊತ್ತಾಗಿದೆ. ಬಸ್‌ನಲ್ಲಿ ಚಿನ್ನದಸರ ಕಳ್ಳತನ ಆಗಿದೆ. ನನಗೆ ಚಿನ್ನದ ಸರ ಹುಡುಕಿ ಕೊಡಿ ಎಂದು ಮೀನಾಕ್ಷಿ ಬಸ್ ಸಮೇತ ಪೊಲೀಸ್ ಠಾಣೆಗೆ ಬಂದಿದ್ದಾಳೆ.
PublicNext
12/03/2026 09:37 pm
LOADING...