ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ಹೆಸ್ಕಾಂ ಅಧ್ಯಕ್ಷ ಖಾದ್ರಿಗಿಲ್ಲ ಸಂಚಾರಿ ರೂಲ್ಸ್ - ಜನರಿಗೆ ಏನು ಸಂದೇಶ ಕೊಡ್ತಿರಾ..?

ಹಾವೇರಿ: ಹೆಸ್ಕಾಂ ಇಲಾಖೆ ಅಧ್ಯಕ್ಷ, ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಅವರಿಗೆ ಸಂಚಾರಿ ನಿಯಮಗಳೇ ಗೊತ್ತಿಲ್ಲ. ಜನಪ್ರತಿನಿಧಿಯಾಗಿ ಸಾರ್ವಜನಿಕರಿಗೆ ಏನು ಸಂದೇಶ ಕೊಡಲು ಹೊರಟಿದ್ದಾರೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ.

ಹಾವೇರಿಯ ಬಂಕಾಪುರ ಬಳಿಯಲ್ಲಿ ಬೈಕ್ ಒಂದನ್ನು ಹೆಲ್ಮೆಟ್ ಧರಿಸದೇ ಚಾಲನೆ ಮಾಡುವ ಮೂಲಕ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದು, ಯುವ ಸಮುದಾಯಕ್ಕೆ ಏನು ಸಂದೇಶ ನೀಡುತ್ತಾರೆ...? ಜನಪ್ರತಿನಿಧಿಯಾಗಿ ಹೀಗೆ ಬೇಜವಾಬ್ದಾರಿ ತೋರಿದರೆ ಹೇಗೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.ಇನ್ನು ಸಾರ್ವಜನಿಕರೊಬ್ಬರು ಹೆಸ್ಕಾಂ ಅಧ್ಯಕ್ಷ ಅಜ್ಜಂಪೀರ್ ಖಾದ್ರಿಯವರ ಹೆಲ್ಮೆಟ್ ರಹಿತ ಬೈಕ್ ಚಾಲನೆ ವಿಡಿಯೋ ಮಾಡಿ ಪಬ್ಲಿಕ್ ನೆಕ್ಸ್ಟ್ ಮಾಧ್ಯಮಕ್ಕೆ ನೀಡಿದ್ದಾರೆ.

Edited By : Vinayak Patil
PublicNext

PublicNext

08/03/2026 08:55 pm

Cinque Terre

26.03 K

Cinque Terre

1

ಸಂಬಂಧಿತ ಸುದ್ದಿ