ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: "ಯಶಸ್ವಿ ಕನ್ನಡ ಸಿನಿಮಾಗಳು ಬರುತ್ತಿಲ್ಲ"- 'ಕೌರವ' ಬೇಸರ

ಹಾವೇರಿ: ಇರಾನ್ ಮತ್ತು ಇಸ್ರೇಲ್ ಯುದ್ಧ ಕನ್ನಡ ಸಿನಿಮಾ ರಂಗದ ಮೇಲೆ ಯಾವುದೇ ಪರಿಣಾಮ ಬೀರಲ್ಲ ಎಂದು ಮಾಜಿ ಸಚಿವ, ನಟ ಬಿ.ಸಿ.ಪಾಟೀಲ್ ಅಭಿಪ್ರಾಯ ಪಟ್ಟಿದ್ದಾರೆ.

ಹಾವೇರಿಯಲ್ಲಿ ಮಾತನಾಡಿದ ಅವರು, ಸಿನಿಮಾ ಉದ್ಯಮಕ್ಕೆ‌ ಮಧ್ಯ ಪ್ರಾಚ್ಯ ಯುದ್ಧ ಪರಿಣಾಮ ಬೀರಲ್ಲ. ಆದರೆ, ಸಿನಿಮಾ ಇಂಡಸ್ಟ್ರಿ ತೊಂದರೆಯಲ್ಲೇ ಇದೆ ಎಂದು ತಿಳಿಸಿದರು.

ಇವತ್ತು ಯಾವ ಚಿತ್ರಗಳೂ ಬಹಳ ದಿನಗಳ ವರೆಗೆ ಪ್ರದರ್ಶಿತವಾಗುತ್ತಿಲ್ಲ. ವರ್ಷಕ್ಕೆ ಒಂದು-ಎರಡು-ಮೂರು ಪರ್ಸೆಂಟ್, ಐದು ಪರ್ಸೆಂಟ್ ಸಕ್ಸಸ್ ಬಿಟ್ರೆ 95ರಷ್ಟು ಫೇಲ್ಯೂರ್ ಇದೆ ಎಂದು ತಿಳಿಸಿದರು.

ಚುನಾವಣೆ ಆದ್ಮೇಲೆ ಸಿನಿಮಾ ಮಾಡಬೇಕು ಅಂತಾ ನೋಡಿದೆ, ನೂರು ಕಥೆ ಕೇಳಿದೆ. ಇಲ್ಲಿ ಯಾರು ಇವತ್ತಿಗೂ ತೃಪ್ತಿಯಾಗುವಂತಹ ಒಂದು ಕಥೆ ಹೇಳಲಿಲ್ಲ. ಉತ್ತಮ ಕಥೆ ತಂದು ಕೊಡುವಂತಹ ಶಕ್ತಿ ಬಹಳಷ್ಟು ಜನರಿಗೆ ಕಡಿಮೆಯಾಗಿದೆ. ಹಾಗಾಗಿ ಸಿನಿಮಾ ಇಂಡಸ್ಟ್ರಿಯಲ್ಲಿ ಕಮಿಟ್ಮೆಂಟ್ ಬಹಳ ಕಡಿಮೆಯಾಗಿದೆ ಎಂದರು.

Edited By : Vinayak Patil
Kshetra Samachara

Kshetra Samachara

16/03/2026 08:16 pm

Cinque Terre

14.66 K

Cinque Terre

0

ಸಂಬಂಧಿತ ಸುದ್ದಿ