ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿಗ್ಗಾವಿ: ​ಶಿಶುನಾಳ ಶರೀಫರ ಪ್ರಾಧಿಕಾರ ಘೋಷಣೆ; ಕಾಂಗ್ರೆಸ್ ಸಂಭ್ರಮ, ಬೊಮ್ಮಾಯಿಗೆ ಶಾಸಕ ಪಠಾಣ್ ಸವಾಲು!

​ಶಿಗ್ಗಾವಿ: ರಾಜ್ಯ ಬಜೆಟ್‌ನಲ್ಲಿ ಸಂತ ಶಿಶುನಾಳ ಶರೀಫರ ಅಭಿವೃದ್ಧಿ ಪ್ರಾಧಿಕಾರವನ್ನು ಘೋಷಿಸಿರುವ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿ, ಶಿಗ್ಗಾವಿ ಪಟ್ಟಣದ ಚನ್ನಮ್ಮ ಸರ್ಕಲ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಅದ್ಧೂರಿಯಾಗಿ ಸಂಭ್ರಮಾಚರಣೆ ನಡೆಸಿದರು.

ಶಾಸಕ ಯಾಸೀರ್ ಖಾನ್ ಪಠಾಣ್ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಲಾಯಿತು.

​​ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಯಾಸೀರ್ ಖಾನ್ ಪಠಾಣ್, "ಶಿಶುನಾಳ ಶರೀಫರ ಪ್ರಾಧಿಕಾರ ರಚನೆ ಎಂಬುದು ಈ ಭಾಗದ ಜನರ ಬಹುದಿನಗಳ ಕನಸಾಗಿತ್ತು. ನಮ್ಮ ಸರ್ಕಾರ ಶಿಶುನಾಳವನ್ನು ಭಾವೈಕ್ಯತೆಯ ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ದೊಡ್ಡ ಹೆಜ್ಜೆ ಇಟ್ಟಿದೆ. ಅಲ್ಲದೆ, 36 ವಸತಿ ಶಾಲೆಗಳಿಗೆ ಶರೀಫರ ಹೆಸರಿಡುವ ಮೂಲಕ ಸರ್ಕಾರ ಅವರಿಗೆ ಅತ್ಯುನ್ನತ ಗೌರವ ನೀಡಿದೆ" ಎಂದು ಹರ್ಷ ವ್ಯಕ್ತಪಡಿಸಿದರು.

​​ಕ್ಷೇತ್ರಕ್ಕೆ ದೊರೆತ ಅನುದಾನಗಳ ಬಗ್ಗೆ ಮಾಹಿತಿ ನೀಡಿದ ಅವರು,

​ಕಾರ್ಮಿಕ ವಸತಿ ಶಾಲೆ (Residency School) ಮಂಜೂರಾತಿ, ​ಮಹಿಳಾ ಕಾಲೇಜು ಸ್ಥಾಪನೆಗೆ ಒತ್ತು,

​ಕ್ಷೇತ್ರದ ವಿವಿಧೆಡೆ ಚೆಕ್ ಡ್ಯಾಂಗಳ ನಿರ್ಮಾಣಕ್ಕೆ ವಿಶೇಷ ಅನುದಾನ, ​ಸಾಮಾನ್ಯ ಶಾಸಕನಾಗಿ ಅಲ್ಪ ಅವಧಿಯಲ್ಲಿಯೇ ದಾಖಲೆ ಮಟ್ಟದ ಅಭಿವೃದ್ಧಿ ಕಾರ್ಯಗಳ ಬಗ್ಗೆ ತಿಳಿಸಿದರು.

​​ಸಂಭ್ರಮಾಚರಣೆಯ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಶಾಸಕ ಪಠಾಣ್ ವಾಗ್ದಾಳಿ ನಡೆಸಿದರು. "ದೊಡ್ಡ ಸ್ಥಾನದಲ್ಲಿದ್ದ ಬೊಮ್ಮಾಯಿಯವರು ತಮ್ಮ ಅಧಿಕಾರಾವಧಿಯಲ್ಲಿ ಈ ಕೆಲಸಗಳನ್ನು ಏಕೆ ಮಾಡಲಿಲ್ಲ? ಅವರಿಗೆ ಕೆಲಸ ಮಾಡಲು ಯಾರಾದರೂ ಕೈ ಹಿಡಿದು ತಡೆದಿದ್ದರಾ?" ಎಂದು ಪ್ರಶ್ನಿಸಿದರು.

​"ಬಸವರಾಜ ಬೊಮ್ಮಾಯಿಯವರು ಚನ್ನಮ್ಮ ಸರ್ಕಲ್‌ನಲ್ಲಿ ಬಹಿರಂಗ ಚರ್ಚೆಗೆ ಬರಲಿ. ನಾನು ಮಾಡಿದ ಅಭಿವೃದ್ಧಿಯ ದಾಖಲೆಗಳನ್ನು ನೀಡುತ್ತೇನೆ, ಅವರೂ ತಮ್ಮ ದಾಖಲೆಗಳನ್ನು ತರಲಿ. ಅಧಿಕಾರದಲ್ಲಿದ್ದಾಗ ಬಸ್ ಉಚಿತ ಮಾಡದವರು, 10 ಕೆಜಿ ಅಕ್ಕಿ ಕೊಡದವರು ಈಗ ಮಾತನಾಡುತ್ತಿದ್ದಾರೆ" ಎಂದು ಶಾಸಕರು ಸವಾಲು ಹಾಕಿದರು.

​ಈ ಸಂದರ್ಭದಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ಉಪಸ್ಥಿತರಿದ್ದು, ರಾಜ್ಯ ಸರ್ಕಾರದ ಜನಪರ ಯೋಜನೆಗಳಿಗೆ ಜೈಕಾರ ಹಾಕಿದರು.

Edited By : Vinayak Patil
PublicNext

PublicNext

06/03/2026 09:20 pm

Cinque Terre

20.56 K

Cinque Terre

1

ಸಂಬಂಧಿತ ಸುದ್ದಿ