ಸವಣೂರು: ಶಿಗ್ಗಾವಿ- ಸವಣೂರು ಕ್ಷೇತ್ರದಲ್ಲಿ ಮುಖ್ಯಮಂತ್ರಿಯಾದವರೂ ಮಾಡದೆ ಇರುವಂತಹ ಅಭಿವೃದ್ಧಿಯನ್ನು ಮಾಡಿದ್ದೇನೆ. ಬೊಮ್ಮಾಯಿ ಅವರು ಅವರ ಅವಧಿಯಲ್ಲಿನ ಕಾರ್ಯಗಳನ್ನು ಹೇಳಲಿ, ನಾನು ನನ್ನ ಅವಧಿಯಲ್ಲಿನ ಅಭಿವೃದ್ಧಿ ಕಾರ್ಯ ಮಾಡಿರುವುದನ್ನು ಹೇಳುತ್ತೇನೆ. ಬೇಕಾದರೆ ಬಹಿರಂಗ ಚರ್ಚೆಗೆ ಬರಲಿ ಎಂದು ಶಾಸಕ ಪಠಾಣ್ ಅವರು ಬೊಮ್ಮಾಯಿ ಅವರಿಗೆ ಓಪನ್ ಚಾಲೆಂಜ್ ನೀಡಿರುವುದಕ್ಕೆ ಬಿಜೆಪಿ ಪದಾಧಿಕಾರಿಗಳು ಸವಾಲು ಸ್ವೀಕರಿಸಿ ಬೊಮ್ಮಾಯಿ ಅವರ ಬದಲಿಗೆ ನಾವು ಬರುತ್ತೇವೆ ಎಂದು ಶಾಸಕ ಪಠಾಣ್ ಅವರಿಗೆ ಸವಾಲ್ ಹಾಕಿದ್ದಾರೆ.
ಸವಣೂರು ಪಟ್ಟಣದಲ್ಲಿ ಮಾತನಾಡಿದ ಬಿಜೆಪಿ ಕಾರ್ಯಕರ್ತರು, ಪ್ರಾಧಿಕಾರ ಮತ್ತು ಅನುಷ್ಠಾನ ಇವೆರಡರ ನಡುವೆ ಮೊದಲು ವ್ಯತ್ಯಾಸ ಏನಿದೆ ಎಂಬುದನ್ನು ಶಾಸಕ ಯಾಶೀರ್ ಖಾನ್ ಪಠಾಣ್ ಹೇಳಲಿ. ಪ್ರಾಧಿಕಾರದ ಕೆಲಸ ಏನು ಮತ್ತು ಅನುಷ್ಠಾನದ ಕೆಲಸ ಏನು? ಇವೆರಡರ ನಡುವಿನ ವ್ಯತ್ಯಾಸ ಹೇಳಲಿ.
ಕ್ಷೇತ್ರದಲ್ಲಿ ಬಸವರಾಜ ಬೊಮ್ಮಾಯಿ ಏನು ಕೆಲಸ ಮಾಡಿದ್ದಾರೆ ಎಂದು ಹೇಳಲು ಅವರು ಬೇಕಾಗಿಲ್ಲ. ನಾವು ಕಾರ್ಯಕರ್ತರೇ ಇದ್ದೀವಿ. ನಿಮ್ಮದು ಮಾತು ಫುಲ್ ಕೆಲಸ ನಿಲ್ಲು ಅನ್ನುವಂತಹ ಶಾಸಕರು ನೀವು. ಕ್ಷೇತ್ರದಲ್ಲಿ ನೀವು ಏನು ಕೆಲಸ ಮಾಡುತ್ತಿದ್ದೀರಿ, ನೀವು ಕಾಮಗಾರಿ ಮುಗಿಯದೇನೆ ಉದ್ಘಾಟನೆಯ ಫೋಟೋ ಹಾಕಿದ್ದೀರಿ, ನಿಮಗೇನು ನಾಚಿಕೆ ಇದೆಯಾ? ಯಾರೋ ಮಾಡಿದ ಕೆಲಸಕ್ಕೆ ಫೋಟೋ ಬೇಕು ನಿಮಗೆ. ನೀವು ಸ್ಥಳ ಹೇಳಿ, ನಾವು ನಿಮ್ಮ ಸವಾಲಿಗೆ ಸಿದ್ಧ
ಎಂದು ಬಿಜೆಪಿಯ ಹಿರಿಯ ಮುಖಂಡರು ಸವಾಲು ಹಾಕಿದ್ದಾರೆ
ವರದಿ: ರಮೇಶ್ ಸೋಮಕ್ಕನವರ, ಪಬ್ಲಿಕ್ ನೆಕ್ಸ್ಟ್
PublicNext
12/03/2026 10:41 pm
LOADING...