ಹಾವೇರಿ: ಸಿಎಂ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್ ಕಳಪೆಯಾಗಿದ್ದು, ಇದು ಅಭಿವೃದ್ಧಿ ಶೂನ್ಯ ಹಾಗೂ ಪ್ರಗತಿರಹಿತವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ.
ಹಾವೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಜೆಟ್ ಕುರಿತು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರವು ಅತೀ ಹೆಚ್ಚು ಸಾಲ ಮಾಡುವ ಮೂಲಕ ಜನರನ್ನು ಸಾಲದ ಶೂಲಕ್ಕೆ ತಳ್ಳುತ್ತಿದೆ. ಈಗಾಗಲೇ ಸುಮಾರು 1.32 ಲಕ್ಷ ಕೋಟಿ ರೂಪಾಯಿ ಸಾಲ ಮಾಡಿದ್ದು, ಈಗ ಮತ್ತೆ 25 ಸಾವಿರ ಕೋಟಿ ರೂಪಾಯಿ ಹೊಸ ಸಾಲಕ್ಕೆ ಮುಂದಾಗಿದೆ ಎಂದರು.
ಈ ಬಜೆಟ್ ಯಾವುದೇ ನಿರ್ದಿಷ್ಟ ಗುರಿ ಅಥವಾ ದಿಕ್ಕಿಲ್ಲದಂತಿದೆ. ರಾಜ್ಯವನ್ನು ಕನಿಷ್ಠ 15 ವರ್ಷಗಳಷ್ಟು ಹಿಂದಕ್ಕೆ ತೆಗೆದುಕೊಂಡು ಹೋಗುವ ಕೆಲಸವನ್ನು ಈ ಸರ್ಕಾರ ಮಾಡುತ್ತಿದೆ.
17 ಬಾರಿ ಬಜೆಟ್ ಮಂಡಿಸಿದ ಅನುಭವವಿರುವ ಸಿದ್ದರಾಮಯ್ಯನವರಿಂದ ಇಂತಹ ಕಳಪೆ ಬಜೆಟ್ ನಿರೀಕ್ಷಿಸಿರಲಿಲ್ಲ. ಇದು ರಾಜ್ಯದ ಜನತೆಗೆ ತೀವ್ರ ನಿರಾಸೆ ಮೂಡಿಸಿದೆ ಎಂದು ಅವರು ತಿಳಿಸಿದರು.
PublicNext
06/03/2026 06:22 pm
LOADING...