ಹಾವೇರಿಯಲ್ಲಿ ಗಾಂಜಾ ಪ್ಯಾಕೇಟ್ ಗೆ ಗಮ್ ಟೇಪ್ ಹಚ್ಚಿ ಜನರಿಗೆ ಗೊತ್ತಾಗದಂತೆ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. 28 ವರ್ಷದ ದಿಳ್ಳೆಪ್ಪ ಅಳಲಗೇರಿ ಹಾಗೂ 27 ವರ್ಷದ ರಾಜಾಸಾಬಾ ನದಾಪ್ ಬಂಧಿತರು.
ಹಾವೇರಿ ನಗರ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಆರೋಪಿಗಳಿಂದ ಸುಮಾರು 10 ಕೆ.ಜಿ. 770 ಗ್ರಾಂ ನಿಷೇಧಿತ ಗಾಂಜಾ ವಶಪಡಿಸಿ ಕೊಳ್ಳಲಾಗಿದೆ.
ಒಡಿಶಾದಿಂದ ನಿಷೇಧಿತ ಗಾಂಜಾ ಖರೀದಿಸಿದ್ದ ಆರೋಪಿಗಳು ಗಾಂಜಾ ಮಾರಾಟಕ್ಕೆ ಯತ್ನಿಸಿದ್ದರು. ಹಾವೇರಿಯ ನಾಗೇಂದ್ರ ಮಟ್ಟಿಯ ಸಾಯಿ ಲೇಔಟ್ ಬಳಿ ಆರೋಪಿಗಳು ಗಾಂಜಾ ಮಾರಾಟಕ್ಕೆ ಪ್ರಯತ್ನಿಸಿದ್ದರು.
PublicNext
19/03/2026 03:05 pm
LOADING...