ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾನಗಲ್‌: ಹೇರೂರು ಗ್ರಾಮದಲ್ಲಿ ಸಾಲದ ಸುಳಿಗೆ ಸಿಲುಕಿ ರೈತ ಆತ್ಮಹತ್ಯೆ

ಹಾನಗಲ್‌: ಸಾಲ ಬಾಧೆ ತಾಳಲಾರದೆ ರೈತರೊಬ್ಬ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾನಗಲ್ ತಾಲೂಕಿನ ಹೇರೂರು ಗ್ರಾಮದಲ್ಲಿ ನಡೆದಿದೆ.

ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಹೇರೂರು ಗ್ರಾಮದ 36 ವರ್ಷ ಮಲ್ಲಪ್ಪ ಮಹದೇವಪ್ಪ ಮಾದರ್, ಮೃತ ರೈತನಾಗಿದ್ದು, ಕಳೆದ ಐದು ವರ್ಷಗಳ ಹಿಂದೆ ಕೃಷಿ ಚಟುವಟಿಕೆ ಮಾಡುವ ಸಲುವಾಗಿ ಹಾನಗಲ್ ಪಟ್ಟಣದ ಚೈತನ್ಯ ಇಂಡಿಯಾ ಫೈನಾನ್ಸ್ ಕಂಪನಿಯಲ್ಲಿ 50.000/ (ಸಾವಿರ )-ರೂ ಬೆಳೆ ಸಾಲ, ಹಾಗೂ ಹಾವೇರಿಯ ಬಿ ಎಸ್ ಎಸ್ ಫೈನಾನ್ಸ್ ಕಂಪನಿಯಲ್ಲಿ 1,00,000/-ಲಕ್ಷ ರೂಗಳ ಸಾಲವನ್ನು ಪಡೆದಿದ್ದರು ಎನ್ನಲಾಗಿದೆ, ಕಳೆದ ಎರಡು ವರ್ಷಗಳಿಂದ ತಾವು ಬೆಳೆದ ಬೆಳೆಗಳು ಸರಿಯಾಗಿ ಬಾರದೇ, ಕೃಷಿಯಲ್ಲಿ ನಷ್ಟ ಅನುಭವಿಸಿ, ಮನನೊಂದು ಹೇರೂರು ಗ್ರಾಮದ ದೊಡ್ಡಕೆರೆಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಆಡೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nagaraj Tulugeri
PublicNext

PublicNext

15/03/2026 10:53 pm

Cinque Terre

15.01 K

Cinque Terre

0

ಸಂಬಂಧಿತ ಸುದ್ದಿ