ಹಾವೇರಿ : ಎಂಟು ಎಕರೆಯಲ್ಲಿ ಬೆಳೆದಿದ್ದ ಮೆಕ್ಕೆಜೋಳದ ರಾಶಿ ಬೆಂಕಿಗಾಹುತಿಯಾದ ಘಟನೆ ಹಾವೇರಿ ತಾಲೂಕು ಕಾಟೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಪರಮೇಶಪ್ಪ ನಾಗಣ್ಣನವರ್ ರೈತನಿಗೆ ಸೇರಿದ್ದ ಮೆಕ್ಕೆಜೋಳದ ರಾಶಿ ಸುಟ್ಟು ಕರಕಲಾಗಿದೆ.
ಕಳೆದ ರಾತ್ರಿ ಕಿಡಿಗೇಡಿಗಳ ಹಚ್ಚಿದ ಬೆಂಕಿಯಿಂದ ರಾಶಿಗೆ ಬೆಂಕಿ ತಗುಲಿದೆ. ಕಿಡಿಗೇಡಿಗಳ ಕೃತ್ಯಕ್ಕೆ ರೈತ ಪರಮೇಶಪ್ಪ ಬೆಚ್ಚಿಬಿದ್ದಿದ್ದಾನೆ.
ಪರಮೇಶಪ್ಪ 8 ಎಕರೆ ಜಮೀನಿನಲ್ಲಿ ಮೆಕ್ಕೆಜೋಳ ಬೆಳೆದಿದ್ದ. ಮೆಕ್ಕೆಜೋಳ ರಾಶಿಯನ್ನ ಜಮೀನಿನಲ್ಲಿ ಮಾಡಿದ್ದ. ಪ್ರಸ್ತುತ ಮೆಕ್ಕೆಜೋಳಕ್ಕೆ ಬೆಲೆ ಕಡಿಮೆ ಇರುವ ಕಾರಣ ಮೆಕ್ಕೆಜೋಳ ಹಾಕಿಸಿ ಮಾರಾಟ ಮಾಡದೇ ತೆನೆ ರಾಶಿ ಹಾಕಿದ್ದ. ಆದರೆ ಕಿಡಿಗೇಡಿಗಳ ಕೃತ್ಯಕ್ಕೆ ನಾಲ್ಕು ಲಕ್ಷ ರೂಪಾಯಿ ಮೌಲ್ಯದ ಮೆಕ್ಕೆಜೋಳ ಇದೀಗ ಸುಟ್ಟು ಕರಕಲಾಗಿದೆ.
PublicNext
09/03/2026 12:34 pm
LOADING...