ಹಾವೇರಿ : ಹಾವೇರಿಯ ಹೋಟೆಲ್ ಮಾಲೀಕರು ಇದೀಗ ಸೌದೆ ಒಲೆಗಳತ್ತ ಮುಖಮಾಡಿದ್ದಾರೆ. ಹಾವೇರಿಯ ಸಾರಿಗೆ ಇಲಾಖೆಯ ಬಸ್ ನಿಲ್ದಾಣದ ಕಟ್ಟಡದಲ್ಲಿರುವ ಬ್ರಾಹ್ಮಿ ಹೋಟೆಲ್ ಮಾಲೀಕರು ಸೌದೆ ಒಲೆಯಲ್ಲಿ ಆಹಾರ ತಯಾರಿಸುತ್ತಿದ್ದಾರೆ.
ಹೋಟೆಲ್ ಮುಂದಿನ ಬಸ್ ನಿಲ್ದಾಣದ ಒಳಗಿನ ಖಾಲಿ ಜಾಗದಲ್ಲಿ ಬೃಹತ್ ಒಲೆ ಹಾಕಿದ್ದಾರೆ. ಕ್ವಿಂಟಲಗಟ್ಟಲೇ ಕಟ್ಟಿಗೆ ಹಾಕಿಸಿ ಮೂರು ಒಲೆಗಳಲ್ಲಿ ಮುಂಜಾನೆಯಿಂದಲೇ ಆಹಾರ ತಯಾರಿಸುತ್ತಿದ್ದಾರೆ.
ವಡೆ, ಪಲಾವ್, ಸಾಂಬಾರ್, ವಿವಿಧ ಪಲ್ಯಗಳು ಮತ್ತು ಅನ್ನ ಹಾಗೂ ನೂಡಲ್ಸ್ ತಯಾರಿಸುತ್ತಿದ್ದಾರೆ. ನಾವು ಸಾರಿಗೆ ಇಲಾಖೆಯ ಬಸ್ ನಿಲ್ದಾಣದಲ್ಲಿ ಬಾಡಿಗೆ ಪಡೆದು ಹೋಟೆಲ್ ಮಾಡುತ್ತಿದ್ದೇವೆ. ಲಕ್ಷಾಂತರ ರೂಪಾಯಿ ಬಾಡಿಗೆ ಕಟ್ಟಬೇಕು. 20ಕ್ಕೂ ಅಧಿಕ ಕಾರ್ಮಿಕರಿಗೆ ಕೂಲಿ ನೀಡಬೇಕು ಗ್ರಾಹಕರನ್ನ ಸಹ ಕಾಯ್ದುಕೊಳ್ಳಬೇಕು ಎನ್ನುತ್ತಾರೆ ಹೋಟೆಲ್ ಮಾಲೀಕರು.
PublicNext
18/03/2026 02:18 pm
LOADING...