ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿಗ್ಗಾವಿ: ವಿಚ್ಛೇದನಕ್ಕೆ ತೆರೆ- ದಂಪತಿಗಳಿಗೆ ನ್ಯಾಯಾಲಯದಲ್ಲಿ ಸಿಕ್ಕ ಹೊಸ ಬಾಳು

ಶಿಗ್ಗಾವಿ: ಶಿಗ್ಗಾವಿ ಪಟ್ಟಣದ ನ್ಯಾಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಮಾನವೀಯ ಪ್ರಸಂಗವೊಂದು ನಡೆಯಿತು. ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದ ದಂಪತಿಗಳ ಪೈಕಿ, ಮೂರು ಜೋಡಿ ಪತಿ-ಪತ್ನಿಯರನ್ನು ರಾಜಿ ಸಂಧಾನದ ಮೂಲಕ ಯಶಸ್ವಿಯಾಗಿ ಒಂದುಗೂಡಿಸಿ, ಅವರ ದಾಂಪತ್ಯ ಜೀವನಕ್ಕೆ ಹೊಸ ಭರವಸೆ ನೀಡಲಾಯಿತು.

ನ್ಯಾಯಾಧೀಶರ ಮಧ್ಯಸ್ಥಿಕೆ

ಹಿರಿಯ ದಿವಾಣಿ ನ್ಯಾಯಾಧೀಶ ಸುನೀಲ ತಳವಾರ ಹಾಗೂ ದಿವಾಣಿ ನ್ಯಾಯಾಧೀಶರಾದ ಅಶ್ವಿನಿ ಚಂದ್ರಕಾಂತ ಅವರು ಬಾಕಿ ಉಳಿದಿದ್ದ ವಿಚ್ಛೇದನ ಪ್ರಕರಣಗಳ ಅರ್ಜಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದರು. ದಂಪತಿಗಳೊಂದಿಗೆ ಪ್ರತ್ಯೇಕವಾಗಿ ಮಾತನಾಡಿ, ಅವರ ಸಮಸ್ಯೆಗಳನ್ನು ಆಲಿಸಿ, ರಾಜಿ ಸಂಧಾನದ ಮೂಲಕ ಅವರನ್ನು ಮತ್ತೆ ಒಂದುಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

Edited By :
PublicNext

PublicNext

14/03/2026 08:33 pm

Cinque Terre

18.3 K

Cinque Terre

0

ಸಂಬಂಧಿತ ಸುದ್ದಿ