ಹಾವೇರಿ : ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಮೇದೂರು ಗ್ರಾಮದಲ್ಲಿ ಎಮ್ಮೆಗಳ ಸರಣಿ ಸಾವು ಮುಂದುವರಿದಿದ್ದು, ಸೋಮವಾರದಿಂದ ಮಂಗಳವಾರದವರೆಗೆ ಒಟ್ಟು 18 ಎಮ್ಮೆಗಳು ಸಾವನ್ನಪ್ಪಿವೆ. ಈ ಘಟನೆ ಗ್ರಾಮಸ್ಥರಲ್ಲಿ ತೀವ್ರ ಆತಂಕ ಮೂಡಿಸಿದೆ.
ಸೋಮವಾರ ಒಂದೇ ದಿನ ವಿಷಪೂರಿತ ಆಹಾರ ಸೇವಿಸಿ 12 ಎಮ್ಮೆಗಳು ಸಾವನ್ನಪ್ಪಿದ್ದವು. ಇದರ ಬೆನ್ನಲ್ಲೇ, ಮಂಗಳವಾರ ಮತ್ತೆ 6 ಎಮ್ಮೆಗಳು ಅಸುನೀಗಿವೆ.
ಮಂಗಳವಾರ ಸಾವನ್ನಪ್ಪಿದ 6 ಎಮ್ಮೆಗಳು ಗ್ರಾಮದ ರೈತ ರಾಮಪ್ಪ ಮಾಸೂರು ಅವರಿಗೆ ಸೇರಿವೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪಶುವೈದ್ಯಾಧಿಕಾರಿಗಳ ತಂಡ ಪರಿಶೀಲನೆ ನಡೆಸಿದೆ. ಸಾವಿಗೆ ನಿಖರ ಕಾರಣ ಪತ್ತೆಹಚ್ಚಲು ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಮೃತಪಟ್ಟ ಎಮ್ಮೆಗಳ ಅಂದಾಜು ಮೌಲ್ಯ ಸುಮಾರು ಮೂರು ಲಕ್ಷ ರೂಪಾಯಿ, ಇಷ್ಟೊಂದು ದೊಡ್ಡ ನಷ್ಟವನ್ನು ಭರಿಸಲು ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
PublicNext
11/03/2026 07:29 am
LOADING...