ಮಡಿಕೇರಿ: ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಇಂದಿನಿಂದ ಆರಂಭವಾಗಿದೆ. ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಆದರೆ, ಕೊಡಗು ಜಿಲ್ಲೆಯ ಶಾಲೆಯೊಂದರ ಇಬ್ಬರು ವಿದ್ಯಾರ್ಥಿಗಳಿಗೆ ವರ್ಷವಿಡೀ ಓದಿದರೂ ಪರೀಕ್ಷೆ ಬರೆಯುವ ಭಾಗ್ಯ ಇಲ್ಲವಾಗಿದೆ!
ಎಸ್ಎಸ್‌ಎಲ್‌ಸಿ ಪರೀಕ್ಷೆ ಪಾಸ್ ಆಗಲು ವರ್ಷವಿಡೀ ವಿದ್ಯಾರ್ಥಿಗಳು 'ತಪಸ್ಸು' ಮಾಡ್ತಾರೆ. ಅದರಂತೆ ಈ ವರ್ಷವೂ ಪರೀಕ್ಷೆಯ ದಿನ ಬಂದಿದೆ. ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಇಂದು ಮೊದಲ ದಿನದ ಪರೀಕ್ಷೆಯನ್ನೂ ಬರೆದಿದ್ದಾರೆ. ಆದರೆ, ಕೊಡಗು ಜಿಲ್ಲೆಯ ಬೆಟ್ಟಗೇರಿಯ ಉದಯ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಗಳ ಪಾಲಿಗೆ ಈ ಪರೀಕ್ಷೆಯ ಭಾಗ್ಯ ದೊರೆತಿಲ್ಲ. ಶಾಲಾ ಆಡಳಿತ ಮಂಡಳಿಯ ನಿರ್ಲಕ್ಷ್ಯವೋ, ಟೆಕ್ನಿಕಲ್ ಸಮಸ್ಯೆಯೋ ಗೊತ್ತಿಲ್ಲ. ವಿದ್ಯಾರ್ಥಿಗಳಿಗೆ ಹಾಲ್ ಟಿಕೇಟ್ ಸಿಕ್ಕಿಲ್ಲ. ಇದ್ರಿಂದ ರೊಚ್ಚಿಗೆದ್ದ ಪೋಷಕರು ಶಾಲೆಯ ಮುಂದೆ ಪ್ರತಿಭಟನೆ ನಡೆಸಿದರು.
ಅಸಲಿಗೆ ಉದಯ ಪ್ರೌಢಶಾಲೆಯ ಲೈಸೆನ್ಸ್ ಸಮಸ್ಯೆ ಇದೆ ಅನ್ನೋ ಮಾತುಗಳು ಇದೆ. ಕಳೆದ ವರ್ಷವೂ ಹೀಗೆ ಹಾಲ್ ಟಿಕೆಟ್ ಸಿಗದೆ ಕೋರ್ಟ್, ಕಚೇರಿ ಅಂತೆಲ್ಲ ನಡೆದು ಕಡೆಗೂ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ರಂತೆ. ಆದ್ರೆ ಈ ಬಾರಿ ಅಂತ ಸಮಸ್ಯೆ ಇಲ್ಲ ಅಂತ ಶಾಲಾ ಆಡಳಿತ ಮಂಡಳಿ ಪೋಷಕರಿಗೆ ಹೇಳಿತ್ತಂತೆ. ಹೀಗಾಗಿ ಶಾಲೆಯನ್ನು ನಂಬಿ ಮಕ್ಕಳನ್ನು ಓದಿಸಿದ್ದ ಪೋಷಕರಿಗೆ ಈ ಬಾರಿಯೂ ಶಾಲಾ ಆಡಳಿತ ಮಂಡಳಿ ಶಾಕ್ ಕೊಟ್ಟಿದೆ.
17 ವಿದ್ಯಾರ್ಥಿಗಳಲ್ಲಿ 15 ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ಸಿಕ್ಕಿದ್ದು, ಇಬ್ಬರಿಗೆ ಸಿಕ್ಕಿಲ್ಲ. ಶಾಲಾ ಆಡಳಿತ ಮಂಡಳಿಯನ್ನು ಕೇಳಿದ್ರೆ ಅದು ನಮ್ಮ ಸಮಸ್ಯೆ ಅಲ್ಲ, ಶಿಕ್ಷಣ ಇಲಾಖೆಯ ಟೆಕ್ನಿಕಲ್ ಸಮಸ್ಯೆ ಅಂತಿದೆ. ಆದ್ರೆ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಕೇಳಿದ್ರೆ ಅದು ಸ್ಯಾಟ್ ನಲ್ಲಿ ಶಾಲೆ ಎಂಟ್ರಿ ಮಾಡದ ನಿರ್ಲಕ್ಷ್ಯದಿಂದ ಹೀಗಾಗಿದೆ ಅಂತಿದಾರೆ.
PublicNext
18/03/2026 10:55 pm
LOADING...