ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಯಚೂರು: ಬಹಿರ್ದೆಸೆಗೆ ತೆರಳಿದ್ದ ಬಾಲಕ ಕಾಲುವೆಗೆ ಬಿದ್ದು ಕಾಲುವೆಗೆ ಬಿದ್ದು ನಾಪತ್ತೆ

ರಾಯಚೂರು: ಬಹಿರ್ದೆಸೆಗೆ ಹೋಗಲೆಂದು ಕಾಲುವೆಗೆ ತೆರಳಿದ್ದ ಬಾಲಕ ನೀರು ಪಾಲಾದ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. ಲಿಂಗಸಗೂರು ತಾಲೂಕಿನ ಜಾವೂರ ಗ್ರಾಮದಲ್ಲಿ ಘಟನೆ ನಡೆದಿದ್ದು 9 ವರ್ಷದ ದಶರಥ ಹಡಪದ ಎಂಬಾತನೇ ಕಾಲುವೆ ನೀರು ಪಾಲಾದ ಬಾಲಕ ಎಂದು ಗುರುತು ಪತ್ತೆಯಾಗಿದೆ.

ಇಂದು ಬೆಳಿಗ್ಗೆ ಮಧ್ಯಾಹ್ನ ಕಾಲುವೆ ಬಳಿ ತೆರಳಿದ್ದ ದಶರಥ ಹಡಪದ ಕಾಲು ಜಾರಿ ನೀರಿಗೆ ಬಿದ್ದಿದ್ದಾನೆ. ಬಾಲಕನ ಹುಡುಕಾಟಕ್ಕೆ ಸ್ಥಳೀಯರಿಂದ ಹರಸಾಹಸ ನಡೆದಿದ್ದು ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿಗಳ ಶೋಧಕಾರ್ಯ ಆರಂಭಿಸಿದ್ದಾರೆ. ಘಟನೆ ಕುರಿತಂತೆ ಲಿಂಗಸಗೂರು ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nagaraj Tulugeri
Kshetra Samachara

Kshetra Samachara

19/03/2026 08:22 am

Cinque Terre

1.96 K

Cinque Terre

0