ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗಾಯಗೊಂಡ ತಾಯಿಗೆ ಪುಟ್ಟ ಕಂದನ ಆಸರೆ - ಮಗುವಿನ ಪ್ರೀತಿಗೆ ವಯಸ್ಸಿನ ಹಂಗಿಲ್ಲ

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಒಂದು ಹೃದಯಸ್ಪರ್ಶಿ ವಿಡಿಯೋ ಎಲ್ಲರ ಗಮನ ಸೆಳೆದಿದೆ. ಪುಟ್ಟ ಬಾಲಕನೊಬ್ಬ ತನ್ನ ಗಾಯಗೊಂಡ ತಾಯಿಯ ಬಗ್ಗೆ ತೋರಿದ ಕಾಳಜಿ ಮತ್ತು ಪ್ರೀತಿ ಈಗ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ಕೇವಲ ಡೈಪರ್ ಧರಿಸಿರುವ ಪುಟ್ಟ ಕಂದಮ್ಮನೊಬ್ಬ, ಊರುಗೋಲುಗಳ ಸಹಾಯದಿಂದ ನಿಧಾನವಾಗಿ ಹೆಜ್ಜೆ ಹಾಕುತ್ತಿರುವ ತನ್ನ ಗಾಯಗೊಂಡ ತಾಯಿಗೆ ಆಸರೆಯಾಗಲು ಪ್ರಯತ್ನಿಸುತ್ತಿರುವ ಹೃದಯಸ್ಪರ್ಶಿ ದೃಶ್ಯ ಎಲ್ಲರ ಗಮನ ಸೆಳೆದಿದೆ. ತಾಯಿ ನಿಧಾನವಾಗಿ ಹೆಜ್ಜೆ ಹಾಕುತ್ತಿದ್ದಂತೆ, ಆ ಮಗು ತನ್ನ ಪುಟ್ಟ ಕೈಗಳಿಂದ ತಾಯಿಯ ಕಾಲುಗಳನ್ನು ನೂಕುತ್ತಾ ಸಹಾಯ ಮಾಡುತ್ತಿರುವುದು ನೋಡುಗರ ಕಣ್ಣಾಲಿಗಳನ್ನು ತೇವಗೊಳಿಸಿದೆ.

ಈ ವಿಡಿಯೋಗೆ 'ತನ್ನ ಗಾಯಗೊಂಡ ತಾಯಿಗೆ ಸಹಾಯ ಮಾಡಲು ಈ ಪುಟ್ಟ ವೀರ ಪ್ರಯತ್ನಿಸುತ್ತಿದ್ದಾನೆ' ಎಂಬ ಶೀರ್ಷಿಕೆ ನೀಡಲಾಗಿದ್ದು, ನೆಟ್ಟಿಗರು ಈತನನ್ನು 'ರಿಯಲ್ ಪ್ರೊಟೆಕ್ಟರ್' ಎಂದು ಬಣ್ಣಿಸಿದ್ದಾರೆ. ಕೇವಲ 16 ಸೆಕೆಂಡುಗಳ ಈ ವಿಡಿಯೋ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ 1 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಹಾಗೂ ಸಾವಿರಾರು ಲೈಕ್ಸ್ ಪಡೆದುಕೊಂಡು ಸಖತ್ ವೈರಲ್ ಆಗಿದೆ. ಪ್ರೀತಿ ಮತ್ತು ಕಾಳಜಿಗೆ ವಯಸ್ಸಿನ ಹಂಗಿಲ್ಲ ಎಂಬುದಕ್ಕೆ ಈ ದೃಶ್ಯವೇ ಸಾಕ್ಷಿಯಾಗಿದೆ. ಅತ್ಯಂತ ಸಣ್ಣ ಹಸ್ತಗಳು ಅತಿದೊಡ್ಡ ಪ್ರೀತಿಯನ್ನು ತೋರಬಲ್ಲವು ಎಂಬುದನ್ನು ಈ ಮಗು ಸಾಬೀತುಪಡಿಸಿದೆ.

Edited By :
PublicNext

PublicNext

19/03/2026 10:10 am

Cinque Terre

37.93 K

Cinque Terre

1

ಸಂಬಂಧಿತ ಸುದ್ದಿ