ತಿರುವನಂತಪುರಂ: ಕೇರಳವು ಭಾರತದಲ್ಲೇ ಗಮನಾರ್ಹವಾಗಿ ಹೆಚ್ಚಿನ ಸಾಕ್ಷರತಾ ಪ್ರಮಾಣವನ್ನು ಹೊಂದಿರುವ ರಾಜ್ಯವಾಗಿದೆ. ಈ ಸಂಗತಿಯನ್ನು ಇತ್ತೀಚೆಗೆ ವೈರಲ್ ಆಗಿರುವ ವಿಡಿಯೋವೊಂದು ಒತ್ತಿ ಹೇಳುತ್ತದೆ.
Instagram ಬಳಕೆದಾರ @eco_traveler_ ಎಂಬುವರು ಈ ವಿಡಿಯೋ ಕ್ಲಿಪ್ ಅನ್ನು ಪೋಸ್ಟ್ ಮಾಡಿದ್ದಾರೆ. ತಲೆಯ ಮೇಲೆ ಭಾರವಾದ ಸೌದೆ ಕಟ್ಟಿಗೆಯನ್ನು ಹೊತ್ತು ಸೇತುವೆ ಮೇಲೆ ನಡೆದು ಹೋಗುತ್ತಿದ್ದ ಕೇರಳದ ಸಾಮಾನ್ಯ ಮಹಿಳೆಯೊಬ್ಬರು, ಅಷ್ಟೇ ಆತ್ಮವಿಶ್ವಾಸದಿಂದ ನಿರರ್ಗಳವಾಗಿ ಇಂಗ್ಲಿಷ್ ಮಾತನಾಡಿದ್ದು ಸೋಷಿಯಲ್ ಮೀಡಿಯಾ ಬಳಕೆದಾರರನ್ನು ಬೆರಗುಗೊಳಿಸಿದೆ. ವಿಡಿಯೋದ ಕಮೆಂಟ್ ಬಾಕ್ಸ್‌ನಲ್ಲಿ 'ಇದು ನಿಜವಾದ ಕೇರಳ ಸ್ಟೋರಿ', 'ರಿಯಲ್ ಮಲಯಾಳಿ' ಎಂಬಂತಹ ಮೆಚ್ಚುಗೆಯ ಮಾತುಗಳು ತುಂಬಿ ತುಳುಕುತ್ತಿವೆ.
ದೆಹಲಿ ಮೂಲದ ತನ್ನ ಸ್ನೇಹಿತೆಯೊಂದಿಗೆ ಸಿಂಗಾಪುರಕ್ಕೆ ಸೈಕಲ್ ಯಾತ್ರೆ ಹೊರಟಿದ್ದ ಮಲಯಾಳಿ ಯುವಕನೊಬ್ಬ, ಮಹಿಳೆಯ ಜೊತೆಗೆ ಮಾತನಾಡಿದ್ದಾನೆ. ಮಹಿಳೆಯು ಈ ಇಬ್ಬರು ಯುವಕರನ್ನು ನೋಡಿದ ತಕ್ಷಣ 'ನೀವು ಯೂಟ್ಯೂಬರ್‌ಗಳಾ?' ಎಂದು ಕುತೂಹಲದಿಂದ ಕೇಳುತ್ತಾರೆ. ಅಲ್ಲಿಂದಲೇ ಅವರ ನಡುವೆ ಸಂಭಾಷಣೆ ಶುರುವಾಗುತ್ತದೆ. ಯುವಕರು ಕೇರಳದ ಹೊರಗಿನವರು ಎಂದು ಭಾವಿಸಿದ ಮಹಿಳೆ, ಇಂಗ್ಲಿಷ್‌ನಲ್ಲೇ ಮಾತನಾಡಲು ಶುರು ಮಾಡುತ್ತಾರೆ. ಆದರೆ, ಒಬ್ಬ ಮಲಯಾಳಿ ಮತ್ತು ಇನ್ನೊಬ್ಬರು ದೆಹಲಿಯವರು ಎಂದು ತಿಳಿದ ಮೇಲೂ ಆಕೆ ತಮ್ಮ ಇಂಗ್ಲಿಷ್ ಸಂಭಾಷಣೆಯನ್ನು ಮುಂದುವರಿಸುತ್ತಾರೆ.
PublicNext
19/03/2026 06:09 pm
LOADING...