ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ : ಕಾರು ಹಾಗೂ ಖಾಸಗಿ ಆಂಬುಲೆನ್ಸ್ ನಡುವೆ ಡಿಕ್ಕಿ, ಕಾರು ಪಲ್ಟಿ

ಶಿವಮೊಗ್ಗ : ಕಾರು ಹಾಗೂ ಖಾಸಗಿ ಆಂಬುಲೆನ್ಸ್ ನಡುವೆ ಮುಖಾಮುಖಿ ಡಿಕ್ಕಿ ಕಾರೊಂದು ಪಲ್ಟಿಯಾದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ನಗರದ ಅಕ್ಕಮಹಾದೇವಿ ವೃತ್ತದ ಬಳಿ ಈ ಅಪಘಾತ ಸಂಭವಿಸಿದೆ.

ಸೊರಬ ಕಡೆಯಿಂದ ಬಂದ ಆಂಬುಲೆನ್ಸ್ ಗೆ ಕಾಶೀಪುರದಿಂದ ಹನಸವಾಡಿಗೆ ಹೋಗ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಕಾರು ಮೂರು ಪಲ್ಟಿ ಹೊಡೆದು ಯಥಾ ಸ್ಥಿತಿಯಲ್ಲಿ ನಿಂತಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದವರು ಪ್ರಾಣೋಪಾಯದಿಂದ ಪಾರಾಗಿದ್ದಾರೆ. ಕಾರಿನಲ್ಲಿ ಸುರೇಶ್, ದೀಪಾ, 14 ವರ್ಷದ ಮಗು ಹಾಗೂ ಕಿಶನ್ ಎಂಬುವರು ಇದ್ದರು. ಕಾರು ಪಲ್ಟಿ ಹೊಡೆದ ಪರಿಣಾಮ ಸಣ್ಣಪುಟ್ಟ ಗಾಯಗಳಾಗಿವೆ. ಕಾರಿನ ಹಿಂದಿನ ಗ್ಲಾಜು ಪುಡಿಯಾಗಿದೆ.

ನಾಲ್ವರನ್ನ ಖಾಸಗಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆದರೆ ಆಂಬುಲೆನ್ಸ್ ಚಾಲಕ ಸಾವಂತ್ ಗೆ ಕಾಲು ಮುರಿದಿದೆ. ತಕ್ಷಣವೇ ಆತನನ್ನು ಹಾಗೂ ಇತರೆ ಮೂವರನ್ನು ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಪೂರ್ವ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Edited By : Abhishek Kamoji
Kshetra Samachara

Kshetra Samachara

19/03/2026 05:50 pm

Cinque Terre

1.42 K

Cinque Terre

0

ಸಂಬಂಧಿತ ಸುದ್ದಿ