ಶಿವಮೊಗ್ಗ : ಇದೊಂದು ದುರಂತ ಘಟನೆ. ನಮ್ಮ ಮೃಗಾಲಯಕ್ಕೆ ಬಂದು ಪ್ರಾಣ ಕಳೆದುಕೊಳ್ಳುವ ಸನ್ನಿವೇಶ ಉಂಟಾಗಿದ್ದು, ನನಗೆ ಅತೀವ ದುಃಖ ತಂದಿದೆ ಎಂದು ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ರಂಗಸ್ವಾಮಿ ಹಾಡ್ಯ ಹೇಳಿದರು.
ಹುಲಿ ಮತ್ತು ಸಿಂಹಧಾಮಕ್ಕೆ ಭೇಟಿ ನೀಡಿ ಮಾತನಾಡಿದ ಅವರು,
ಘಟನೆ ಹೇಗಾಯಿತು ಎನ್ನುವುದಕ್ಕೆ ಪೊಲೀಸ್ ಹಾಗೂ ಇಲಾಖೆಯಿಂದ ತನಿಖೆ ಆರಂಭವಾಗಿದೆ. ಇತ್ತೀಚೆಗೆ ಕೆಲಸಕ್ಕೆ ಸೇರಿದ ಡಾ.ಸಮೀಕ್ಷಾ ರೆಡ್ಡಿ ಮೃಗಾಲಯದಲ್ಲಿರುವ ಪ್ರಾಣಿಗಳ ಬಗ್ಗೆ ಅತಿಯಾದ ಪ್ರೀತಿ ತೋರುತ್ತಿದ್ದರು. ಆ ಪ್ರೀತಿಯೇ ಅವರ ಪ್ರಾಣಕ್ಕೆ ಕುಂದು ತಂದಿರುವುದು ತುಂಬಾ ನೋವು ತಂದಿದೆ. ತಪ್ಪಿತಸ್ಥರು ಏನೇ ಆದರೂ ಕ್ರಮ ಕೈಗೊಳ್ಳುತ್ತೇವೆ ಎಂದರು.
ಇಬ್ಬರು ಸಿಬ್ಬಂದಿಗಳೊಂದಿಗೆ ಬಂದಿದ್ದ ಸಮೀಕ್ಷಾ ರೆಡ್ಡಿ ನೀರಾನೆಯ ಚಿಕಿತ್ಸೆಗೆ ಮುಂದಾಗಿದ್ದರು. ಅವರು ನೀರಾನೆ ಬಳಿ ಹೋದಾಗ, ಹೆಣ್ಣು ನೀರಾನೆ ಹಂಸ ಸಿಟ್ಟಿಗೆದ್ದಿದೆ. ಕಾರಣ ಅದು ಗರ್ಭಿಣಿಯಾಗಿತ್ತು. ಗರ್ಭಿಣಿಯಾಗಿದ್ದಾಗ ಅದು ಊಟ-ತಿಂಡಿ ಎಲ್ಲವೂ ಬಿಟ್ಟಿರುತ್ತದೆ. ಸಮೀಕ್ಷಾ ರೆಡ್ಡಿ ಅವರನ್ನು ನೋಡಿ, ರೊಚ್ಚಿಗೆದ್ದಿದೆ. ಅದರಿಂದ ತಪ್ಪಿಸಿಕೊಳ್ಳಲು ಹೋಗಿದ್ದ ವೈದ್ಯೆ ಏಣಿಯಿಂದ ಜಾರಿ ಕೆಳಗೆ ಬಿದ್ದಿದ್ದಾರೆ. ಆ ಸಮಯದಲ್ಲಿ ಅವರನ್ನು ಕಚ್ಚಿದೆ. ಗಾಯಗೊಂಡ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಮಾಹಿತಿ ನನಗೆ ಅಧಿಕಾರಿಗಳಿಂದ ಗೊತ್ತಾಗಿದೆ ಎಂದರು.
PublicNext
21/03/2026 10:31 pm
LOADING...