ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾಸನ: ಪೆನ್‌ಡ್ರೈವ್ ಪ್ರಕರಣ - ಜೆಡಿಎಸ್ ನಾಯಕರಿಗೇ ಶಾಕ್ ನೀಡಿದ ಎಸ್‌ಐಟಿ ಚಾರ್ಜ್‌ಶೀಟ್!

ಹಾಸನ: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ (SIT) ಸಲ್ಲಿಸಿರುವ ದೋಷಾರೋಪ ಪಟ್ಟಿ ಜೆಡಿಎಸ್ ವಲಯದಲ್ಲಿ ಭಾರಿ ತಲ್ಲಣ ಮೂಡಿಸಿದೆ. ಪೆನ್‌ಡ್ರೈವ್ ಹಂಚಿಕೆ ಪ್ರಕರಣದಲ್ಲಿ ಕೇವಲ ವಿರೋಧ ಪಕ್ಷಗಳಲ್ಲದೆ, ಸ್ವತಃ ಜೆಡಿಎಸ್ ಕಾರ್ಯಕರ್ತರೇ ಆರೋಪಿಗಳಾಗಿರುವುದು ತನಿಖೆಯಲ್ಲಿ ಬಯಲಾಗಿದೆ. ಶಾಸಕ ಸ್ವರೂಪ್ ಚಿಕ್ಕಪ್ಪ ಹರ್ಷ ಅವರ ಪುತ್ರ ರೇವಂತ್, ಆತನ ಸ್ನೇಹಿತ ತೇಜಸ್, ಭವಾನಿ ರೇವಣ್ಣ ಆಪ್ತ ಎನ್.ಸಿ. ಹರೀಶ್ ಹಾಗೂ ಜೆಡಿಎಸ್ ಕಾರ್ಯಕರ್ತ ಬೂವನಹಳ್ಳಿ ಮಂಜು ಸೇರಿದಂತೆ 7ಕ್ಕೂ ಹೆಚ್ಚು ಜನರ ಮೇಲೆ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ.

ರಾಜಕೀಯ ಪಿತೂರಿಯಿಂದ ವಿಡಿಯೋ ವೈರಲ್ ಮಾಡಲಾಗಿದೆ ಎಂದು ಆರೋಪಿಸಿದ್ದ ಜೆಡಿಎಸ್ ನಾಯಕರಿಗೆ, ಸ್ವಪಕ್ಷದವರೇ ಈ ಕೃತ್ಯದಲ್ಲಿ ಭಾಗಿಯಾಗಿರುವುದು ಮುಜುಗರ ತಂದಿದೆ. ಐಟಿ ಆ್ಯಕ್ಟ್ 2008ರ ಸೆಕ್ಷನ್ 67ಎ ಅಡಿ ಗಂಭೀರ ಆರೋಪಗಳನ್ನು ಹೊರಿಸಲಾಗಿದೆ.

ದೇಶಾದ್ಯಂತ ಸದ್ದು ಮಾಡಿದ್ದ ಈ ಪ್ರಕರಣದಲ್ಲಿ ಈಗ 'ಮನೆಯವರೇ' ಸಿಕ್ಕಿಬಿದ್ದಿರುವುದು ಹಾಸನ ರಾಜಕಾರಣದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.

Edited By : PublicNext Desk
PublicNext

PublicNext

19/03/2026 07:57 pm

Cinque Terre

14.99 K

Cinque Terre

0

ಸಂಬಂಧಿತ ಸುದ್ದಿ