ಸಕಲೇಶಪುರ : ತಾಲೂಕಿನ ಬಾಗೆ ಗ್ರಾಮದಲ್ಲಿರುವ ಉಪ್ಪಿ ಕ್ಯಾಂಟೀನ್ ನಲ್ಲಿ ಕಳ್ಳತನ ನಡೆದಿರುವ ಘಟನೆ ಬೆಳಕಿಗೆ ಬಂದಿದ್ದು, ಸ್ಥಳೀಯ ವ್ಯಾಪಾರಿಗಳು ಹಾಗೂ ಗ್ರಾಮಸ್ಥರಲ್ಲಿ ಆತಂಕದ ವಾತಾವರಣ ಉಂಟಾಗಿದೆ
ಅಪರಿಚಿತ ಕಳ್ಳರು ಕ್ಯಾಂಟೀನ್ ಗೆ ನುಗ್ಗಿ ಒಂದು ಯುಪಿಎಸ್ ಯಂತ್ರ ಸೇರಿದಂತೆ ಸುಮಾರು 20ರಿಂದ 30 ಸಾವಿರ ರೂಪಾಯಿ ಮೌಲ್ಯದ ವ್ಯಾಪಾರ ಸಾಮಗ್ರಿಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ತಿಳಿದು ಬಂದಿದೆ. ಬೆಳಿಗ್ಗೆ ಕ್ಯಾಂಟೀನ್ ತೆರೆಯುವ ವೇಳೆ ಈ ಘಟನೆ ಗಮನಕ್ಕೆ ಬಂದಿದ್ದು, ಮಾಲೀಕರು ಮತ್ತು ಸ್ಥಳೀಯರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಘಟನೆಯ ವೇಳೆ ಕಳ್ಳರು ಕ್ಯಾಂಟೀನ್‌ಗೆ ನುಗ್ಗಿ ಕಳ್ಳತನ ನಡೆಸುತ್ತಿರುವ ದೃಶ್ಯಗಳು ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಸೆರೆಹಿಡಿಯಲ್ಪಟ್ಟಿವೆ ಎಂದು ತಿಳಿದುಬಂದಿದೆ. ಈ ದೃಶ್ಯಗಳು ಈಗ ಕಳ್ಳರನ್ನು ಪತ್ತೆಹಚ್ಚಲು ಪ್ರಮುಖ ಸಾಕ್ಷಿಯಾಗುವ ಸಾಧ್ಯತೆ ಇದೆ.
ಸ್ಥಳೀಯರ ಪ್ರಕಾರ ಇದೇ ಕ್ಯಾಂಟೀನ್‌ನಲ್ಲಿ ಇದು ಮೂರನೇ ಬಾರಿ ಕಳ್ಳತನ ನಡೆದಿರುವುದು ಆತಂಕ ಹೆಚ್ಚಿಸಿದೆ. ಪದೇಪದೇ ಇಂತಹ ಘಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಭದ್ರತೆ ಬಗ್ಗೆ ಪ್ರಶ್ನೆಗಳು ಎದ್ದಿದ್ದು, ವ್ಯಾಪಾರಿಗಳು ಹಾಗೂ ಸಾರ್ವಜನಿಕರು ಕಳವಳ ವ್ಯಕ್ತಪಡಿಸಿದ್ದಾರೆ.
ಗ್ರಾಮಸ್ಥರು ಮಾತನಾಡಿ, “ಪದೇಪದೇ ಕಳ್ಳತನ ನಡೆಯುತ್ತಿರುವುದು ತುಂಬಾ ಕಳವಳಕಾರಿ. ಗ್ರಾಮದಲ್ಲಿ ರಾತ್ರಿ ವೇಳೆಯಲ್ಲಿ ಪೊಲೀಸ್ ಗಸ್ತು ಹೆಚ್ಚಿಸಿ ಕಳ್ಳರನ್ನು ಶೀಘ್ರ ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದ್ದಾರೆ.
PublicNext
21/03/2026 04:37 pm
LOADING...