ಹಾಸನ: ಜಿಲ್ಲೆಯ ಅರಸೀಕರೆ ತಾಲೂಕಿನ ತಾವರೆಹಳ್ಳಿ ಗ್ರಾಮದ ಬಳಿ ಶನಿವಾರ (ಮಾ. 21) ಹಣದ ವಿಚಾರಕ್ಕಾಗಿ ನಡೆದ ಜಗಳ ವಿಕೋಪಕ್ಕೆ ತಿರುಗಿ ಯುವಕನೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ.
ಅರಕೆರೆ ಗ್ರಾಮದ ಪ್ರವೀಣ್ (34) ಕೊಲೆಯಾದ ದುರ್ದೈವಿ. ನಿರ್ಜನ ಪ್ರದೇಶದಲ್ಲಿ ಜೂಜಾಟ (ಇಸ್ಪೀಟ್) ಆಡುತ್ತಿದ್ದ ವೇಳೆ ಹಣದ ಹಂಚಿಕೆ ವಿಚಾರವಾಗಿ ಗಲಾಟೆ ನಡೆದಿದೆ ಎನ್ನಲಾಗಿದೆ. ಈ ವೇಳೆ ಪ್ರವೀಣ್‌ನನ್ನು ಹತ್ಯೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಘಟನಾ ಸ್ಥಳಕ್ಕೆ ಜಾವಗಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಹಾಸನದ ಹಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಜಾವಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
Kshetra Samachara
21/03/2026 11:03 am
LOADING...