ಅರಸೀಕೆರೆ: ತಾಲ್ಲೂಕಿನ ದುಮ್ಮೆನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಮ್ಮನಹಟ್ಟಿಯ ಶ್ರೀ ಗಂಗಮಳಮ್ಮ ದೇವಿ ದೇವಸ್ಥಾನದ ಹುಂಡಿ ಹಣವನ್ನು ಎನ್.ಆರ್. ಸಂತೋಷ್ ಅವರು ಮನೆಗೆ ಕೊಂಡೊಯ್ದಿದ್ದಾರೆ ಎಂಬ ಆರೋಪವನ್ನು ದೇವಸ್ಥಾನದ ಟ್ರಸ್ಟಿಗಳು ತಳ್ಳಿಹಾಕಿದ್ದಾರೆ.ಈ ಕುರಿತು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿರುವ ಟ್ರಸ್ಟಿಗಳು, "ನಮ್ಮ ಮೇಲಿನ ಆರೋಪಗಳು ಸತ್ಯಕ್ಕೆ ದೂರವಾಗಿವೆ. ಹುಂಡಿ ಹಣದಲ್ಲಿ ದೇವಸ್ಥಾನಕ್ಕೆ ಚಿನ್ನಾಭರಣಗಳನ್ನು ಮಾಡಿಸಿ ಒಪ್ಪಿಸಲಾಗಿದೆ. ಇದಕ್ಕೆ ಸಂಬಂಧಿಸಿದ ಎಲ್ಲಾ ಅಧಿಕೃತ ದಾಖಲೆಗಳು ನಮ್ಮ ಬಳಿಯಿವೆ," ಎಂದು ತಿಳಿಸಿದ್ದಾರೆ. ಹಣವನ್ನು ವೈಯಕ್ತಿಕವಾಗಿ ಬಳಸಿಕೊಂಡಿಲ್ಲ ಎಂದು ಟ್ರಸ್ಟಿಗಳು ಸ್ಪಷ್ಟಪಡಿಸಿದ್ದಾರೆ. ನಾಳೆ ಗ್ರಾಮಸ್ಥರ ಸಮ್ಮುಖದಲ್ಲೇ ಹಂತ-ಹಂತವಾಗಿ ಹಣದ ಬಳಕೆ ಮತ್ತು ಚಿನ್ನ ಖರೀದಿಯ ದಾಖಲೆಗಳನ್ನು ಬಹಿರಂಗಪಡಿಸುವುದಾಗಿ ಸವಾಲು ಹಾಕಿದ್ದಾರೆ.
Kshetra Samachara
10/03/2026 12:30 pm
LOADING...