ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಾದಗಿರಿ: ತಿಮ್ಮಾಪುರ ಹಳೆ ಬಸ್ ನಿಲ್ದಾಣ ಹೋಟೆಲ್ ಆಗಿ ಮಾರ್ಪಾಡು - ಕಣ್ಣು ಮುಚ್ಚಿ ಕುಳಿತ ಅಧಿಕಾರಿಗಳು

ಯಾದಗಿರಿ ಜಿಲ್ಲೆಯ ಸುರಪುರ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರ ಹಸನಾಪುರ ಕಾಂಪೌಂಡ್ ಗೋಡೆಗೆ ಹೊಂದಿಕೊಂಡಿರುವ ತಿಮ್ಮಾಪುರದ ಹಳೆ ಬಸ್ ನಿಲ್ದಾಣವು ಸದ್ಯ ಹೋಟೆಲ್ ಆಗಿ ಮಾರ್ಪಾಡಾಗಿದೆ ಮತ್ತು ಅದರ ಪಕ್ಕದಲ್ಲಿ ಕಟ್ಟಿಗೆ ಅಡ್ಡೆ ಇದೆ. ಇದನ್ನೆಲ್ಲಾ ಕಂಡಿದ್ದು ಕಾಣದಂತೆ ಸುಮ್ಮನಿರುವ ಕ.ಕ.ರ.ಸಾ.ನಿ ಅಧಿಕಾರಿಗಳ ನಡೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಸದ್ಯ ಬಿಸಿಲು ಹೆಚ್ಚಾಗಿದೆ, ಬಸ್‌ಗಾಗಿ ಕಾಯುವ ಜನರು ಬಿಸಿಲಿನಲ್ಲಿಯೇ ನಿಂತುಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಸರ್ಕಾರಿ ಕಟ್ಟಡದಲ್ಲಿಯೇ ಕಾನೂನು ಬಾಹಿರವಾಗಿ ಹೋಟೆಲ್ ನಡೆಸುತ್ತಿರುವ ವ್ಯಕ್ತಿಗಳ ಮೇಲೆ ಪ್ರಕರಣ ದಾಖಲಿಸಿ, ತಕ್ಷಣವೇ ಆ ಸ್ಥಳದಲ್ಲಿರುವ ಅಂಗಡಿಗಳನ್ನು ತೆರವುಗೊಳಿಸಬೇಕು ಮತ್ತು ಕಂಡು ಕಾಣದಂತೆ ವರ್ತಿಸುತ್ತಿರುವ ಅಧಿಕಾರಿಗಳ ಮೇಲೆ ತಕ್ಷಣವೇ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕ.ರ.ವೇ ಸ್ವಾಭಿಮಾನಿ ಬಣ ತಾಲೂಕು ಅಧ್ಯಕ್ಷ ಸಚಿನ್ ಕುಮಾರ್ ನಾಯಕ ಆಗ್ರಹಿಸಿದರು.

ಹೊಸ ಬಸ್ ನಿಲ್ದಾಣದ ಒಳಗಡೆ ಸ್ವಚ್ಛತೆ ಮರೆಮಾಚಿದೆ, ಮುಂಭಾಗದಲ್ಲಿ ಹಣ್ಣಿನ ಅಂಗಡಿ ,ಪಾನ್ ಶಾಪ್ ಇಟ್ಟು ವ್ಯಾಪಾರ ಮಾಡುತ್ತಿದ್ದಾರೆ, ಬಸ್ ನಿಲ್ದಾಣ ಸಾರ್ವಜನಿಕರ ಉಪಯೋಗಕ್ಕೆ ಇಲ್ಲದಂತಾಗಿದೆ ಎಂದು ದೂರಿದರು.

Edited By :
PublicNext

PublicNext

20/03/2026 01:44 pm

Cinque Terre

12.51 K

Cinque Terre

0