ಕಡೂರು : ಅಕ್ರಮ ಮದ್ಯ ಮಾರಾಟಗಾರರ ವಿರುದ್ಧ ಪೊಲೀಸರು ಮಿಂಚಿನ ದಾಳಿ ನಡೆಸಿದ್ದಾರೆ. ಕಡೂರು ಟೌನ್‌ನ ಎಪಿಎಂಸಿ ಮಾರುಕಟ್ಟೆಯ ಸಂತೆ ಮೈದಾನದಲ್ಲಿ ಸಾರ್ವಜನಿಕರಿಗೆ ಚಿಲ್ಲರೆಯಾಗಿ ಮದ್ಯ ಮಾರಾಟ ಮಾಡುತ್ತಿದ್ದ ಮಲ್ಲಿದೇವಿಹಳ್ಳಿ ಗ್ರಾಮದ ಎಂ.ಆರ್. ರಮೇಶ್ ಎಂಬಾತನನ್ನು ಸಂಚಾರಿ ಪಿಎಸ್ಐ ಲೀಲಾವತಿ ನೇತೃತ್ವದ ತಂಡ ರೆಡ್ ಹ್ಯಾಂಡ್ ಆಗಿ ಹಿಡಿದಿದೆ. ಬಂಧಿತನಿಂದ ಏಳು ವಿಸ್ಕಿ ಪೌಚ್‌ಗಳು ಹಾಗೂ ಮದ್ಯ ಸೇವನೆಗೆ ಬಳಸುತ್ತಿದ್ದ ಪ್ಲಾಸ್ಟಿಕ್ ಲೋಟ ಸೇರಿದಂತೆ ಇತರೆ ಪರಿಕರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಕ್ರಮ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಎಚ್ಚರಿಸಿದೆ.
PublicNext
20/03/2026 01:48 pm
LOADING...