ಶೃಂಗೇರಿ: ಪಟ್ಟಣದ ಗಾಂಧಿ ಮೈದಾನದ ಪಾರ್ಕ್ ಸಮೀಪದ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಇಸ್ಪೀಟು ಜೂಜಾಟ ಆಡುತ್ತಿದ್ದ ಐವರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಖಚಿತ ಮಾಹಿತಿಯ ಮೇರೆಗೆ ಶೃಂಗೇರಿ ಠಾಣೆಯ ಪಿಎಸ್ಐ ಅಭಿಷೇಕ್ ಕೆ. ಮತ್ತು ಸಿಬ್ಬಂದಿ ಈ ದಾಳಿ ನಡೆಸಿದ್ದಾರೆ. ಬಂಧಿತರನ್ನು ಕಾಂಚೀನಗರದ ರವಿ, ಹನುಮಂತನಗರದ ಮುತ್ತು, ದಾವಣಗೆರೆಯ ಪರಮೇಶಪ್ಪ, ಕಾಂಚೀನಗರದ ಸತೀಶ್ ಮತ್ತು ದಾವಣಗೆರೆ ಜಿಲ್ಲೆಯ ಮಲ್ಲೇಶ್ ಎಂದು ಗುರುತಿಸಲಾಗಿದೆ.
ದಾಳಿಯ ಸಮಯದಲ್ಲಿ ಸ್ಥಳದಿಂದ 52 ಇಸ್ಪೀಟು ಎಲೆಗಳು ಹಾಗೂ 1,680 ರೂ. ನಗದು ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
PublicNext
20/03/2026 05:53 pm
LOADING...