ಟೆಹ್ರಾನ್: ವಿಶ್ವದಾದ್ಯಂತ ಮಾನವ ಹಕ್ಕುಗಳ ಪರ ಧ್ವನಿ ಕೇಳಿಬರುತ್ತಿದ್ದರೂ, ಇರಾನ್ ಸರ್ಕಾರ ತನ್ನ ದಮನಕಾರಿ ಧೋರಣೆಯನ್ನು ಕೈಬಿಟ್ಟಿಲ್ಲ. ಇತ್ತೀಚಿನ ದೇಶವ್ಯಾಪಿ ಪ್ರತಿಭಟನೆಗಳಲ್ಲಿ ಭಾಗಿಯಾಗಿದ್ದ 19 ವರ್ಷದ ಕುಸ್ತಿಪಟು ಸಲೇಹ್ ಮೊಹಮ್ಮದಿ ಸೇರಿದಂತೆ ಮೂವರನ್ನು ಸಾರ್ವಜನಿಕವಾಗಿ ನೇಣಿಗೇರಿಸುವ ಮೂಲಕ ಇರಾನ್ ಆಡಳಿತ ತನ್ನ ವಿಕೃತಿಯನ್ನು ಪ್ರದರ್ಶಿಸಿದೆ.
ಇರಾನ್‌ನ ಕ್ಯೂಮ್ ನಗರದಲ್ಲಿ ಗುರುವಾರ ಬೆಳಿಗ್ಗೆ ಸಲೇಹ್ ಮೊಹಮ್ಮದಿ, ಸಯೀದ್ ದಾವೋದಿ ಮತ್ತು ಮೆಹದಿ ಘಾಸೆಮಿ ಎಂಬುವವರನ್ನು ಸಾರ್ವಜನಿಕರ ಸಮ್ಮುಖದಲ್ಲೇ ಗಲ್ಲಿಗೇರಿಸಲಾಗಿದೆ. 2025ರ ಅಂತ್ಯದಲ್ಲಿ ನಡೆದ ಪ್ರತಿಭಟನೆ ವೇಳೆ ಪೊಲೀಸರ ಕೊಲೆ ಮಾಡಿದ ಆರೋಪ ಇವರ ಮೇಲಿತ್ತು. ಆದರೆ, ಮಾನವ ಹಕ್ಕುಗಳ ಸಂಘಟನೆಗಳು ಇದನ್ನು "ಕಾನೂನುಬಾಹಿರ ರಾಜಕೀಯ ಹತ್ಯೆ" ಎಂದು ಬಣ್ಣಿಸಿವೆ. ಕುಸ್ತಿ ಲೋಕದಲ್ಲಿ ದೊಡ್ಡ ಹೆಸರು ಮಾಡುವ ಕನಸು ಕಂಡಿದ್ದ 19 ವರ್ಷದ ಸಲೇಹ್‌ನನ್ನು ಬಲಿ ಪಡೆಯುವ ಮೂಲಕ ಇರಾನ್ ಕ್ರೀಡಾ ಸಮುದಾಯದಲ್ಲಿ ಭಯ ಹುಟ್ಟಿಸಲು ಯತ್ನಿಸಿದೆ.
ಆರೋಪಿಗಳಿಗೆ ವಕೀಲರ ನೆರವು ನೀಡದೆ, ಚಿತ್ರಹಿಂಸೆ ನೀಡಿ ಬಲವಂತವಾಗಿ ತಪ್ಪೊಪ್ಪಿಗೆ ಪಡೆಯಲಾಗಿತ್ತು ಎಂದು ಅಮ್ನೆಸ್ಟಿ ಇಂಟರ್ನ್ಯಾಷನಲ್ ಆರೋಪಿಸಿದೆ. ಇರಾನ್ ಸರ್ಕಾರದ ಈ ಮೃಗೀಯ ವರ್ತನೆಯ ವಿರುದ್ಧ ವಿಶ್ವಸಂಸ್ಥೆ ಮಧ್ಯಪ್ರವೇಶಿಸಬೇಕು ಮತ್ತು ಆ ದೇಶವನ್ನು ಅಂತಾರಾಷ್ಟ್ರೀಯ ಕ್ರೀಡಾಕೂಟಗಳಿಂದ ನಿಷೇಧಿಸಬೇಕು ಎಂಬ ಕೂಗು ಈಗ ಜಾಗತಿಕವಾಗಿ ಕೇಳಿಬರುತ್ತಿದೆ.
PublicNext
20/03/2026 02:26 pm
LOADING...