ಐಪಿಎಲ್‌ನ ಉದ್ಘಾಟನಾ ಆವೃತ್ತಿಯಿಂದ ಇಲ್ಲಿಯವರೆಗೆ ಪ್ರತಿ ಸೀಸನ್‌ನಲ್ಲಿ ಆಡಿದವರು ಕೇವಲ ನಾಲ್ವರು ಮಾತ್ರವೇ ಇದ್ದಾರೆ. ಅವರೆಂದರೆ ಎಂಎಸ್ ಧೋನಿ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಮನೀಶ್ ಪಾಂಡೆ.
ಈ ನಾಲ್ವರಲ್ಲಿ, ಎಂಎಸ್ ಧೋನಿ (ಸಿಎಸ್‌ಕೆ ಮತ್ತು ಆರ್‌ಪಿಎಸ್) ಹಾಗೂ ರೋಹಿತ್ ಶರ್ಮಾ (ಡೆಕ್ಕನ್ ಚಾರ್ಜರ್ಸ್ ಮತ್ತು ಮುಂಬೈ ಇಂಡಿಯನ್ಸ್) ತಲಾ ಎರಡು ಫ್ರಾಂಚೈಸಿಗಳನ್ನು ಪ್ರತಿನಿಧಿಸಿದ್ದಾರೆ. ಆದರೆ, ಮನೀಶ್ ಪಾಂಡೆ ಬರೋಬ್ಬರಿ ಏಳು ವಿಭಿನ್ನ ಫ್ರಾಂಚೈಸಿಗಳ ಪರ ಆಡಿದ್ದಾರೆ.
ಇನ್ನು ವಿರಾಟ್ ಕೊಹ್ಲಿ ವಿಷಯಕ್ಕೆ ಬಂದರೆ, ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪರ ಮಾತ್ರ ಆಡಿದ್ದು, ಐಪಿಎಲ್ ಇತಿಹಾಸದಲ್ಲಿ ಒಂದೇ ಫ್ರಾಂಚೈಸಿಯನ್ನು ಪ್ರತಿನಿಧಿಸಿದ ಏಕೈಕ ಆಟಗಾರರಾಗಿ ವಿಶಿಷ್ಟ ದಾಖಲೆ ಹೊಂದಿದ್ದಾರೆ.
PublicNext
21/03/2026 07:01 pm
LOADING...