ನವದೆಹಲಿ: ಭಾರತದ ಮಾಜಿ ಲೆಗ್ ಸ್ಪಿನ್ನರ್ ಲಕ್ಷ್ಮಣ್ ಶಿವರಾಮಕೃಷ್ಣನ್ ಬಿಸಿಸಿಐ ಕಾಮೆಂಟರಿ ಹುದ್ದೆಯಿಂದ ನಿವೃತ್ತಿ ಘೋಷಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಸಮಾಧಾನ ವ್ಯಕ್ತಪಡಿಸಿರುವ ಅವರು, "ನಾನು 23 ವರ್ಷಗಳಿಂದ ಟಾಸ್ ಮತ್ತು ಪ್ರಸ್ತುತಿಗೆ ಅವಕಾಶ ಪಡೆಯಯಲಿಲ್ಲ. ರವಿಶಾಸ್ತ್ರಿ ಕೋಚ್ ಆಗಿದ್ದಾಗಲೂ ಪಿಚ್ ವರದಿಗಳು, ಟಾಸ್ ಮತ್ತು ಪ್ರಸ್ತುತಿ ಮಾಡಲು ಹೊಸಬರಿಗೆ ಅವಕಾಶ ನೀಡಲಾಯಿತು. ಇದರ ಹಿಂದಿನ ಕಾರಣ ಏನಿರಬಹುದು ಎಂದು ನೀವು ಭಾವಿಸುತ್ತೀರಿ?" ಎಂದು ಪ್ರಶ್ನಿಸಿದ್ದಾರೆ.
"ನಾನು ನನ್ನ ಸ್ವಾಭಿಮಾನವನ್ನು ಬಲಿಕೊಡಲು ಮತ್ತು ಕೀಳಾಗಿ ವರ್ತಿಸಲು ಬಯಸುವುದಿಲ್ಲ. ಅದು ನಾನಲ್ಲ" ಎಂದು ಲಕ್ಷ್ಮಣ್ ಶಿವರಾಮಕೃಷ್ಣನ್ ಅವರು ತಮ್ಮ ನಿರ್ಧಾರಕ್ಕೆ ಕಾರಣ ನೀಡಿದ್ದಾರೆ.
PublicNext
20/03/2026 03:41 pm
LOADING...