ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIRAL : ಥೈಲ್ಯಾಂಡ್‌ನ ವಾಕ್ ಸ್ಟ್ರೀಟ್‌ನಲ್ಲಿ ರಷ್ಯನ್ ಮಹಿಳೆ ಮೇಲೆ ಗುಂಪು ಹಲ್ಲೆ! ಪ್ರವಾಸಿಗರಲ್ಲಿ ಆತಂಕ

VIRAL : ಥೈಲ್ಯಾಂಡ್‌ನ ಜನಪ್ರಿಯ ಪ್ರವಾಸಿ ತಾಣ ಪಟ್ಟಾಯದ ವಾಕಿಂಗ್ ಸ್ಟ್ರೀಟ್‌ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಸ್ಥಳೀಯ ಮಹಿಳೆಯೊಂದಿಗೆ ವಾಗ್ವಾದಕ್ಕಿಳಿದಿದ್ದ ರಷ್ಯಾದ ಪ್ರವಾಸಿ ಮಹಿಳೆಯೊಬ್ಬರ ಮೇಲೆ ಐವರು ಸ್ಥಳೀಯ ಮಹಿಳೆಯರ ಗುಂಪು ಹಲ್ಲೆ ನಡೆಸಿದೆ.

ವಾಗ್ವಾದ ತಾರಕಕ್ಕೇರಿ, ಸ್ಕರ್ಟ್ ಧರಿಸಿದ್ದ ರಷ್ಯಾದ ಪ್ರವಾಸಿ ಮಹಿಳೆಯ ಮೇಲೆ ಪಿಂಕ್ ಬಟ್ಟೆ ಧರಿಸಿದ್ದ ಸ್ಥಳೀಯ ಮಹಿಳೆ ಸೇರಿದಂತೆ ಐವರು ಸ್ಥಳೀಯ ಮಹಿಳೆಯರ ಗುಂಪು ಭೀಕರವಾಗಿ ಹಲ್ಲೆ ನಡೆಸಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ರಾತ್ರಿ ವೇಳೆ ಜನಸಂದಣಿಯಿಂದ ತುಂಬಿದ್ದ ಮಾರುಕಟ್ಟೆಯಲ್ಲಿ ಈ ಘಟನೆ ನಡೆದಿದೆ. ಈ ಹಲ್ಲೆಯಿಂದ ಪ್ರವಾಸಿ ಮಹಿಳೆ ಗಂಭೀರವಾಗಿ ಗಾಯಗೊಂಡು, ರಕ್ತಸಿಕ್ತವಾಗಿ ಬಿದ್ದಿದ್ದಾರೆ.

ಈ ಹಲ್ಲೆಯ ದೃಶ್ಯಗಳನ್ನು ಸೆರೆಹಿಡಿದ ವೀಡಿಯೊವನ್ನು ರಷ್ಯಾವನ್ನು ಟೀಕಿಸುವ ಬೆಲರೂಸಿಯನ್ NEXTA ಖಾತೆಯಿಂದ ಪೋಸ್ಟ್ ಮಾಡಲಾಗಿದೆ. ರಷ್ಯಾ-ಉಕ್ರೇನ್ ಯುದ್ಧದಿಂದ ಉಂಟಾಗಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳ ನಡುವೆ ರಷ್ಯಾ ವಿರೋಧಿ ಭಾವನೆಗಳನ್ನು ಮತ್ತಷ್ಟು ತೀವ್ರಗೊಳಿಸಿತು. ಪಟ್ಟಾಯ ಪೊಲೀಸರು ಈ ಹಲ್ಲೆಯ ಬಗ್ಗೆ ತನಿಖೆಗೆ ಮುಂದಾಗಿದ್ದಾರೆ.

Edited By : Abhishek Kamoji
PublicNext

PublicNext

20/03/2026 02:48 pm

Cinque Terre

51.29 K

Cinque Terre

1

ಸಂಬಂಧಿತ ಸುದ್ದಿ