ಶಿವಮೊಗ್ಗ: ತಾಲೂಕಿನ ಚೋರಡಿ ಸಮೀಪದ ತುಪ್ಪೂರಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಿಸದೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ತುಪ್ಪೂರಿನ ದಶವಂತ್ (46) ಆತ್ಮಹತ್ಯೆ ಮಾಡಿಕೊಂಡವರು. 2005ರಲ್ಲಿ ಮದುವೆಯಾಗಿದ್ದ ದಶವಂತ್ ವಿಚ್ಛೇದನ ಪಡೆದು ತುಪ್ಪೂರಿನಲ್ಲೇ ವೆಲ್ಡಿಂಗ್ ಕೆಲಸ ಮಾಡಿಕೊಂಡಿದ್ದರು. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
21/03/2026 10:58 am
LOADING...