ಶಿವಮೊಗ್ಗ : ತಾಲೂಕಿನ ಹೊನ್ನಾಪುರ ಗ್ರಾಮದಲ್ಲಿ ಕ್ಯಾಂಟೀನ್‌ನಲ್ಲಿ ಕಳ್ಳರು ಕೈಚಳಕ ತೋರಿದ್ದಾರೆ. ಖದೀಮರು ಮೊದಲು ಸಿಸಿ ಕ್ಯಾಮೆರಾವನ್ನು ಒಡೆದು, ಒಳಗಿದ್ದ ಕ್ಯಾಮೆರಾ ವೈರ್ ಕಿತ್ತು ಕ್ಯಾಮೆರಾ ಸಹ ಕದ್ದಿರುವ ಘಟನೆ ವರದಿಯಾಗಿದೆ.
ಕ್ಯಾಂಟೀನ್‌ನಲ್ಲಿದ್ದ ಸಿಗರೆಟ್, ವಿಮಲ್, ಜ್ಯೂಸ್ ಹಾಗೂ ಸುಮಾರು 50 ಸಾವಿರ ರೂ. ಹಣವನ್ನು ದೋಚಿ ಕಳ್ಳರು ಪರಾರಿಯಾಗಿದ್ದಾರೆ. ಈ ಕ್ಯಾಂಟೀನ್ ಸನಾ ಎಂಬುವರಿಗೆ ಸೇರಿದೆ. ಇದು ಮೂರನೇ ಸಲ ಕಳ್ಳತನವಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಪದೇ ಪದೇ ನಡೆಯುತ್ತಿರುವ ಕಳ್ಳತನಗಳಿಂದ ಗ್ರಾಮಸ್ಥರು ಬೇಸತ್ತು ಹೋಗಿದ್ದು, ಕಳ್ಳರ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
21/03/2026 05:47 pm
LOADING...